ಅಥಣಿ: ‘ಹಿಂದುಳಿದ ವರ್ಗದ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗದೆ, ಉನ್ನತಿ ಹೊಂದಲು ಪೂರಕ ವಾತವರಣ ನೀಡುವುದು ನಮ್ಮ ಕರ್ತವ್ಯವಾಗಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು .

ತಾಲ್ಲೂಕಿನ ಯಂಕಚ್ಚಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ಯೋಜನೆಯಡಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಕೆ.ಆರ್.ಐ.ಡಿ.ಎಲ್ನಿಂದ ₹2 ಕೋಟಿ ಅನುದಾನದಡಿ ಚಾಲನೆ ನೀಡಿ ಮಾತನಾಡಿದರು.

‘ಶಾಲಾ ಕಟ್ಟಡಗಳು ಗುಣಮಟ್ಟದಾಗಿರಬೇಕು ಹಾಗೂ ಮಕ್ಕಳಿಗೆ ಕಲಿಕಾ ಸ್ಥಳದಲ್ಲಿ ನೈಸರ್ಗಿಕ ವಾತಾವರಣವಿರಬೇಕು. ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಿ’ ಎಂದರು .

ತೆಲಸಂಗ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅಮೋಘ ಖೋಬ್ರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ ಪತ್ತಾರ, ವಸತಿ ನಿಲಯದ ಮೇಲ್ವಿಚಾರಕ ಓಗೆಪ್ಪಾ ಅರಟಾಳ, ಕೆ.ಆರ.ಐ.ಡಿ.ಎಲ್ ಅಧಿಕಾರಿಗಳಾದ ಸಂತೋಷ ಶೇಗುಣಸಿ, ಅಡಿವೇಪ್ಪಾ ಉಳ್ಳಾಗಡ್ಡಿ, ನಾಗರಾಜ ತೇವರಟ್ಟಿ, ಮುಖಂಡರಾದ ತುಕಾರಾಮ ಗೊಂದಳಿ ಬಸವರಾಜ ಹೊಕ್ಕಂಡಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.