ಅಥಣಿ: ಗೈರಾಣ ಜಾಗದಲ್ಲಿ ಅಕ್ರಮವಾಗಿ ವಾಸವಾಗಿರುವ ಕುಟುಂಬಗಳ ಜನರಿಂದ ಲಂಚ ಪಡೆದು ಅಥಣಿ ಪುರಸಭೆಯಿಂದ ನಿವೇಶನ ನೀಡುವುದಾಗಿ ನಂಬಿಸಿ ನಕಲಿ ಕೈಬರಹದ ಉತಾರಗಳನ್ನು ಪೂರೈಸಿದ್ದಲ್ಲದೆ, ಕೈಬರಹ ಉತಾರಗಳನ್ನು ಡಿಜಿಟಲ್ ಉತಾರವಾಗಿ ನೀಡುವುದಾಗಿ ನಂಬಿಸಿ ಪುರಸಭೆಯ ಸಿಬ್ಬಂದಿಯೊಬ್ಬರು ಫಲಾನುಭವಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದಾಗಿ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಸಂಪತ್ತಕುಮಾರ ಶೆಟ್ಟಿ ಆರೋಪಿಸಿದ್ದಾರೆ.

ಅಥಣಿ ಪಟ್ಟಣದ ಹೊರವಲಯದಲ್ಲಿರುವ ಕೃಷ್ಣಾ ಬಡಾವಣೆಯ ಸರ್ವೆ ನಂ. 348 ರಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು, ಇವರಲ್ಲಿ ಅನೇಕ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ, ಇನ್ನೂ ಅನೇಕ ಫಲಾನುಭವಿಗಳಿಗೆ ಹಕ್ಕು ಪತ್ರಗಳು ಇಲ್ಲದೆ ಇರುವ ಕಾರಣ ಅವರು ಅನೇಕ ಬಾರಿ ಹಕ್ಕು ಪತ್ರಕ್ಕಾಗಿ ಪುರಸಭೆಗೆ ಅಲೆದಾಡಿದ್ದರು.

‘ಪುರಸಭೆಯ ಸಿಬ್ಬಂದಿ ( ವಾಟರ್ ಮ್ಯಾನ್) ವಾದಿರಾಜ ವಾಲ್ವೆಕರ ಮತ್ತು ಅವರ ಸ್ನೇಹಿತ ರಂಜಾನ ಮುಜಾವರ ಸೇರಿ ಅಕ್ರಮ ನಿವಾಸಿಗಳನ್ನು ನಂಬಿಸಿ ಲಂಚ ಪಡೆದು ಕೈಬರಹ ಉತಾರಗಳನ್ನು ಪೂರೈಸಿದ್ದಾರೆ. ಇತ್ತೀಚೆಗಷ್ಟೇ ಈ ಕೈಬರಹ ಉತಾರಗಳನ್ನು ಡಿಜಿಟಲ್ ಉತಾರ( ಫಾರ್ಮ್ ನಂಬರ್ 9 ) ಪೂರೈಸುವುದಾಗಿ ನಂಬಿಸಿ ಒಬ್ಬೊಬ್ಬ ಫಲಾನುಭವಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ’ ಎಂದು ಆಪಾದಿಸಿದ್ದಾರೆ.

ಹಣ ನೀಡಿದವರು ಡಿಜಿಟಲ್ ಉತಾರ ನೀಡುವಂತೆ ಒತ್ತಾಯಿಸಿದಾಗ ನೆಪಗಳನ್ನು ಹೇಳಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದರು. ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಗಳನ್ನು ವಿಚಾರಿಸಿದಾಗ ಸರ್ಕಾರದ ಗೈರಾಣ ಜಾಗದಲ್ಲಿ ನಿವೇಶನ ನೀಡಲು ಬರುವುದಿಲ್ಲ ಎಂದಿದ್ದಾರೆ. ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಿ, ವಂಚಿಸಿರುವ ಹಣವನ್ನು ಮರಳಿ ಕೊಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

‘ಕೃಷ್ಣ ಬಡಾವಣೆಯ ವಂಚಿತ ಜನರು ಮನವಿ ಸಲ್ಲಿಸಿದ್ದು, ವಾದಿರಾಜ್ ವಾಲ್ವೆಕರ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದ ಉತ್ತರ ಬಂದ ನಂತರ, ವಂಚನೆ ಆಗಿರುವುದು ಕಂಡುಬಂದಲ್ಲಿ ಶಿಸ್ತುಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ’ ಎಂದು ಅಥಣಿ ಪುರಸಭೆ ಮುಖ್ಯಾಧಿಕಾರಿ
ಅಶೋಕ ಗುಡಿಮನಿ ತಿಳಿಸಿದ್ದಾರೆ.

ವಂಚನೆ ಮಾಡಿರುವವರ ವಿರುದ್ಧ ತಾಲ್ಲೂಕು ಆಡಳಿತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಂಚನೆಗೊಳಗಾದವರ ಜೊತೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಅಥಣಿಯ ನ್ಯಾಯವಾದಿ ಸಂಪತ್ತಕುಮಾರ ಶೆಟ್ಟಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.