ಸೋಮವಾರ, ಸೆಪ್ಟೆಂಬರ್ 20, 2021
26 °C

ಬೆಳಗಾವಿ ಪಾಲಿಕೆ ಫಲಿತಾಂಶ: ಸೋತು ಗೆದ್ದ ಸಂಗೊಳ್ಳಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಾರ್ಡ್ ಸಂಖ್ಯೆ 7ರಲ್ಲಿ ಗೆಲುವು ಸಾಧಿಸಿರುವುದಾಗಿ ಸಂಭ್ರಮಿಸುತ್ತಾ, ವಿಜಯದ ನಗೆ ಬೀರುತ್ತಾ ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದ ಬಿಜೆಪಿಯ ಅಭ್ಯರ್ಥಿ ಜ್ಯೋತಿಬಾ ನಾಯಕ ಅವರಿಗೆ ಕೆಲವೇ ನಿಮಿಷಗಳಲ್ಲಿ ನಿರಾಸೆ ಉಂಟಾಯಿತು. 

ಸೋತಿದ್ದೇನೆಂದು ತಿಳಿದು ಹೊರ ನಡೆದಿದ್ದ ಕಾಂಗ್ರೆಸ್‌ನ ಮಹ್ಮದ ಸೊಹೈಲ್ ಸಂಗೊಳ್ಳಿ ಅವರು ಬಳಿಕ ಗೆಲುವಿನ ಸಂಭ್ರಮ ಆಚರಿಸಿದರು.

ಅಧಿಕೃತವಾಗಿ ಫಲಿತಾಂಶ ಹೊರಬೀಳುವ ಮುನ್ನವೇ ಸಂಭ್ರಮಿಸಿದ್ದ ಬಿಜೆಪಿಯ ಜ್ಯೋತಿಬಾ ನಾಯಕ ಅವರಿಗೆ ನಿರಾಸೆ ಉಂಟಾಯಿತು. ಕಾಂಗ್ರೆಸ್‌ನ ಸಂಗೊಳ್ಳಿ ಗೆಲುವು ಸಾಧಿಸಿದ್ದಾರೆ ಎಂಬ ಫಲಿತಾಂಶ ಹೊರ ಬಿದ್ದಿತು. 

ಹೀಗಾಗಿ ಹೊರ ಹೋಗಿದ್ದ ಕಾಂಗ್ರೆಸ್‌ನ ಸಂಗೊಳ್ಳಿ ಗೆದ್ದಿರುವ ವಿಷಯ ತಿಳಿದು ಸಂಭ್ರಮಿಸಿದರು. ಸಂಗೊಳ್ಳಿ ಅವರಿಗೆ 1,171 ಮತ ಸಿಕ್ಕರೆ, ಬಿಜೆಪಿಯ ಜ್ಯೋತಿಬಾ ಅವರಿಗೆ 1,151 ಮತಗಳು ದೊರೆತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು