ಸತ್ತಿಗೇರಿ ಸುತ್ತಲಿನ ಗ್ರಾಮಗಳಲ್ಲಿ ಮಳೆ ನೀರು ನಿಂತು ಗೋವಿನಜೋಳದ ಬೆಳೆ ನಾಶವಾಗಿದ್ದನ್ನು ರೈತರು ತೋರಿಸಿದರು
ಸತ್ತಿಗೇರಿ ಸುತ್ತಲಿನ ಗ್ರಾಮಗಳಲ್ಲಿ ಮಳೆ ನೀರು ನಿಂತು ಕೊಳೆತ ಬೆಳ್ಳುಳ್ಳಿ ಬೆಳೆ
ಆಗಸ್ಟ್‌ನಲ್ಲಿ 6ರಿಂದ 10ರ ಅವಧಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೀಡಾದ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದೇವೆ. ಸೆಪ್ಟೆಂಬರ್ ಕೊನೇ ವಾರ ಸುರಿದ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಪ್ರಗತಿಯಲ್ಲಿದೆ
–ಎಚ್.ಡಿ.ಕೋಳೇಕರ ಜಂಟಿನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ
ತೋಟಗಾರಿಕೆ ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ನಿಯಮಾನುಸಾರ ಶೀಘ್ರವೇ ಪರಿಹಾರ ರೈತರ ಕೈಗೆಟುಕಲಿದೆ
–ಮಹಾಂತೇಶ ಮುರಗೋಡ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ
ಬೆಳೆ ಹಾನಿ ಗಮನಕ್ಕೆ ಬಂದಿದೆ. ಸರ್ವೆ ಮಾಡಲು ತಿಳಿಸಿದ್ದೇನೆ. ಯರಗಟ್ಟಿ– ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಲಾಗುವುದು.
–ರಮೇಶ ಹಾವರಡ್ಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸವದತ್ತಿ
ಪ್ರತಿ ಎಕರೆಯಲ್ಲಿ ಕ್ಯಾರೆಟ್ ಬೆಳೆಯಲು ₹45 ಸಾವಿರ ಖರ್ಚಾಗಿತ್ತು. ಆದರೆ ಫಸಲು ಹಾಳಾಗಿ ಹಾಕಿದ ಬಂಡವಾಳವೂ ಕೈಗೆ ಬಂದಿಲ್ಲ. ಸರ್ಕಾರ ತ್ವರಿತವಾಗಿ ಪರಿಹಾರ ನೀಡಲಿ
–ಈರಣ್ಣ ಮೀಶಿಪಾಟೀಲ ರೈತ ನೇಸರಗಿ
ಕಟಾವಿಗೆ ಬಂದು ನಿಂತ ಬೆಳೆಗಳು ಕೈಗೆ ಬಾರದಂತಾಗಿವೆ. ಸಂಬಂಧಿತ ಅಧಿಕಾರಿಗಳು ಪರಿಶೀಲನೆ ಮಾಡಿ ರೈತರಿಗೆ ಪರಿಹಾರ ನೀಡಬೇಕು
–ಮಹಾಂತೇಶ ತೋಟಗಿ ರೈತ ಕೋ.ಶಿವಾಪುರ
ನನ್ನ ಹೊಲದಲ್ಲಿ ಬೆಳೆದ ಬೆಳ್ಳುಳ್ಳಿ ಈರುಳ್ಳಿ ಬೆಳೆ ನೀರುಪಾಲಾಗಿದೆ. ₹90 ಸಾವಿರ ವೆಚ್ಚದಲ್ಲಿ ಬೀಜ ಖರೀದಿಸಿದ್ದೆ. ₹50 ಸಾವಿರ ವ್ಯಯಿಸಿ ಔಷಧ ₹60 ಸಾವಿರ ವ್ಯಯಿಸಿ ಗೊಬ್ಬರ ಖರೀದಿಸಿದ್ದೆ. ಆದರೆ ಈಗ ಬೆಳೆ ಕೈಗೆ ಬಾರದೆ ಸಂಕಷ್ಟದಲ್ಲಿ ಕೈತೊಳೆಯುವಂತಾಗಿದೆ ಳ