ಬೆಳಗಾವಿ: ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ಗುರುವಾರ ಮಳೆ ಬಿಡುವು ಕೊಟ್ಟಿದ್ದರೂ, ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ಬುಧವಾರ 38 ಸೇತುವೆ ಮುಳುಗಡೆಯಾಗಿದ್ದವು. ಗುರುವಾರ ಆ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

ಘಟಪ್ರಭಾ ನದಿಗೆ ನಿರ್ಮಿಸಿದ 14, ದೂಧಗಂಗಾ ನದಿಗೆ ನಿರ್ಮಿಸಿದ 9, ಮಲಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳ ತಲಾ 6, ಕೃಷ್ಣಾ ನದಿಯ 5, ಮಾರ್ಕಂಡೇಯ ನದಿಯ 2 ಮತ್ತು ವೇದಗಂಗಾ ನದಿಯ 1 ಸೇತುವೆ ಮುಳುಗಡೆ ಸ್ಥಿತಿಯಲ್ಲಿದೆ.

ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಸೇತುವೆ ಬಳಿ 2,26,707 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಈ ಪೈಕಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪುರೆ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 1,85,875 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಸದಲಗಾ ಬಳಿ ದೂಧಗಂಗಾ ನದಿಯಿಂದ 40,832 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ದೂಧಗಂಗಾ ನದಿಯ ಯಕ್ಸಂಬಾ-ದಾನವಾಡ, ಸದಲಗಾ-ಬೋರಗಾಂವ ಸೇತುವೆ ಮುಳುಗಡೆಯಾದ ಕಾರಣ, ಕರ್ನಾಟಕ–ಮಹಾರಾಷ್ಟ್ರ ಮಧ್ಯೆ ಸಂಚಾರ ಕಡಿತಗೊಂಡಿದೆ. ಉಭಯ ರಾಜ್ಯಗಳಲ್ಲಿನ ಗ್ರಾಮಗಳಿಗೆ ತೆರಳಲು ಜನರು 25ರಿಂದ 30 ಕಿ.ಮೀ ಸುತ್ತು ಬಳಸಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ.

ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಕಾರಣ, ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಸೇತುವೆ ಮುಳುಗಡೆಯಾಗಿದೆ. ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಆವರಣ, ಹುಣಶ್ಯಾಳ ಪಿ.ವೈ. ಗ್ರಾಮದ ಹನುಮಂತ ದೇವರ ದೇವಸ್ಥಾನ ಜಲಾವೃತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.