ಮಹಿಳೆಯರ 10 ಕಿ.ಮೀ ಮ್ಯಾರಥಾನ್‍ನಲ್ಲಿ ಬೆಳಗಾವಿಯ ನಕೋಶಾ ಮಂಗನಾಕರ(42 ನಿ.13 ಸೆ.) ಪ್ರಥಮ, ಬೈಲಹೊಂಗಲ ತಾಲ್ಲೂಕಿನ ಮೇಕಲಮರ್ಡಿಯ ಶಿಲ್ಪಾ ಹೊಸಮನಿ ದ್ವಿತೀಯ ಮತ್ತು ಬೆಳಗಾವಿಯ ಶುಭಾಂಗಿ ಕಾಕತಿಕರ ತೃತೀಯ ಸ್ಥಾನ ಗಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮನ ವೃತ್ತದಿಂದ ಆರಂಭಗೊಂಡ ಮ್ಯಾರಥಾನ್ ಅರಳಿಕಟ್ಟೆ, ನಿಚ್ಚಣಕಿ, ಅವರಾದಿ, ಮಲ್ಲಾಪುರ ಮಾರ್ಗವಾಗಿ ಸಾಗಿ ಕೋಟೆ ಆವರಣದಲ್ಲಿ ಮುಕ್ತಾಯವಾಯಿತು.
ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಸ್ಪರ್ಧೆಗೆ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ತರಬೇತುದಾರ ಸಂಜೀವಕುಮಾರ ನಾಯಕ, ಜಿ.ಎನ್.ಪಾಟೀಲ, ಬಸವರಾಜ ಜಕ್ಕನ್ನವರ, ಬಿ.ಎಸ್.ಪಾಟೀಲ, ಸಿ.ರಾಮರಾವ್ ಇತರರಿದ್ದರು.