ಬೆಳಗಾವಿ: 15 ವರ್ಷದ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ, ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.

2023ರ ನವೆಂಬರ್ 5ರಂದು ಈ ಮದುವೆ ನಡೆದಿದ್ದು, ಇಲ್ಲಿಯವರೆಗೂ ವಿಷಯ ಬೆಳಕಿಗೆ ಬಂದಿರಲಿಲ್ಲ. ಮದುವೆ ಸಂದರ್ಭದಲ್ಲಿ ಬಾಲಕಿಗೆ ಕೇವಲ 15 ವರ್ಷ ವಯಸ್ಸಾಗಿತ್ತು ಎಂದು ಯಮಕನಮರಡಿ ಠಾಣೆ ಪೊಲೀಸರು ಭಾನುವಾರ ದಾಖಲಿಸಿದ ಎಫ್ಐಆರ್ನಲ್ಲಿ ನಮೂದಿಸಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಪರ್ವಿನ್ ನೇತೃತ್ವದ ತಂಡಕ್ಕೆ ಬಂದ ಮಾಹಿತಿ ಆಧರಿಸಿ ಈ ಪ್ರಕರಣ ಬೇಧಿಸಲಾಗಿದೆ. ಅಧಿಕಾರಿಗಳ ನಾಲ್ಕು ಸಲ ಬಸ್ಸಾಪುರಕ್ಕೆ ಭೇಟಿ ಬಾಲಕಿಯನ್ನು ಪತ್ತೆ ಮಾಡಲು ಯತ್ನಿಸಿತು. ಇದನ್ನು ಅರಿತ ಆರೋಪಿ ಬಾಲಕಿಯ ನಕಲಿ ಜನ್ಮ ಪ್ರಮಾಣ ಪತ್ರ ಸೃಷ್ಟಿ ಮಾಡಿ ಯಾಮಾರಿಸಿದ್ದ. ತನ್ನ ಪತ್ನಿ ಪ್ರಾಪ್ತ ವಯಸ್ಸಿನವಳು ಎಂದು ತಾನೇ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದ್ದ.

ಬಾಲಕಿಯ ಶಾಲಾ ದಾಖಲಾತಿಗಳನ್ನು ಹಾಗೂ ಜನ್ಮ ಪ್ರಮಾಣ ಪತ್ರವನ್ನು ಹೋಲಿಕೆ ಮಾಡಿದಾಗ, ಆಕೆ ಅಪ್ರಾಪ್ತಳು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಖಿಸಿದ್ದಾರೆ.

ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.