ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದಲ್ಲಿ ನಿರ್ಮಿಸಿರುವ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಭವನ ಬಳಕೆಯಾಗದೆ ಧೂಳು ತಿನ್ನುತ್ತಿದ್ದು, ಬೀಗ ಹಾಕಿದ ಸ್ಥಿತಿಯಲ್ಲೇ ಇದೆ!

ಮಹಾತ್ಮ ಗಾಂಧೀಜಿ ಅತ್ಯಾಪ್ತರಲ್ಲಿ ತಾಲ್ಲೂಕಿನ ಹುದಲಿಯ ಗಂಗಾಧರರಾವ್ ದೇಶಪಾಂಡೆ ಅವರೂ ಒಬ್ಬರು. 1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ರೂವಾರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಅವರ ಸ್ಮಾರಕವನ್ನು ಹುದಲಿಯಲ್ಲಿ ನಿರ್ಮಿಸಲು 2009ರಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ, ಜಾಗದ ಕೊರತೆಯಿಂದಾಗಿ ಅದು ನನೆಗುದಿಗೆ ಬಿದ್ದಿತ್ತು.

ಈ ಮಧ್ಯೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದವರು ರಾಮತೀರ್ಥ ನಗರದಲ್ಲಿ 15 ಗುಂಟೆ ಜಾಗ ನೀಡಿದರು. ಅಲ್ಲಿ ₹1 ಕೋಟಿ ವೆಚ್ಚದಲ್ಲಿ ಸ್ಮಾರಕ ಭವನದ ಕಟ್ಟಡ ನಿರ್ಮಾಣವಾಗಿತ್ತು.

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸವಿನೆನಪಿಗಾಗಿ 2024ರಲ್ಲಿ ಆವರಣ ಗೋಡೆ ನಿರ್ಮಾಣ, ಪೇವರ್ಸ್ ಅಳವಡಿಕೆ ಮತ್ತಿತರ ಕಾಮಗಾರಿಗಳನ್ನು ಸರ್ಕಾರ ಕೈಗೊಂಡಿತ್ತು. ‘ಗಾಂಧಿ ಭಾರತ್’ ಕಾರ್ಯಕ್ರಮದ ವೇಳೆ (2024ರ ಡಿಸೆಂಬರ್ 26ರಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಭವನ ಉದ್ಘಾಟಿಸಿದ್ದರು. ಇದರಲ್ಲಿ ಗಂಗಾಧರರಾವ್ ಪ್ರತಿಮೆ ಇದ್ದು, ಗಂಗಾಧರರಾವ್ ಜೀವನಚರಿತ್ರೆ ಸಾರುವ ಮತ್ತು ಕಾಂಗ್ರೆಸ್ ಅಧಿವೇಶನದ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ಈಗ ಭವನ ಸದ್ಬಳಕೆ ಆಗದಿರುವುದು ಇತಿಹಾಸಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಮಾರಕ ವೀಕ್ಷಿಸಲು ಬರುವವರು ಬೇಸರದಿಂದ ಹಿಂದಿರುಗುತ್ತಿದ್ದಾರೆ.

Highlights - ಗಾಂಧೀಜಿ ಅತ್ಯಾಪ್ತರಲ್ಲಿ ಒಬ್ಬರಾಗಿದ್ದ ಗಂಗಾಧರರಾವ್ ದೇಶಪಾಂಡೆ 15 ಗುಂಟೆ ಜಾಗದಲ್ಲಿ ಭವನ ನಿರ್ಮಾಣ ಆರು ತಿಂಗಳ ಹಿಂದೆ ಮುಖ್ಯಮಂತ್ರಿಯಿಂದ ಉದ್ಘಾಟನೆ

Quote - ಸ್ಮಾರಕ ಭವನ ನಿರ್ಮಿಸಿ ಬೀಗ ಹಾಕಿದ ಸ್ಥಿತಿಯಲ್ಲೇ ಇರಿಸಿದರೇನು ಪ್ರಯೋಜನ? ಇದರ ಸದ್ಬಳಕೆ ಮಾಡಬೇಕು. ಇತಿಹಾಸಪ್ರಿಯರನ್ನು ಸೆಳೆಯುವ ಕೆಲಸವಾಗಬೇಕು ರವೀಂದ್ರ ದೇಶಪಾಂಡೆ ಅಧ್ಯಕ್ಷ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಸಮಿತಿ

Quote - ಯುವಜನರಿಗೆ ಗಂಗಾಧರರಾವ್ ದೇಶಪಾಂಡೆ ಅವರ ಇತಿಹಾಸ ತಿಳಿಸುವ ಉದ್ದೇಶದಿಂದ ನಿರ್ಮಿಸಿದ ಸ್ಮಾರಕ ಭವನದ ಆಶಯ ಈಡೇರುತ್ತಿಲ್ಲ ಸುರೇಶ ಯಾದವ ಸಾಮಾಜಿಕ ಕಾರ್ಯಕರ್ತ

Quote - ಭವನವನ್ನು ನಿರ್ವಹಣೆಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದೇವೆ. ನಾವು ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಅದನ್ನು ಕ್ರಿಯಾಶೀಲವಾಗಿ ಇರಿಸಲು ಕ್ರಮ ವಹಿಸುತ್ತೇವೆ ವಿದ್ಯಾವತಿ ಭಜಂತ್ರಿ ಉಪನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Quote - ಮೇಯರ್ ಹಾಗೂ ಪಾಲಿಕೆಯ ಸ್ಥಳೀಯ ಸದಸ್ಯರ ಜತೆಗೆ ಚರ್ಚಿಸಿ ಭವನದ ನಿರ್ವಹಣೆಗೆ ಕ್ರಮ ಜರುಗಿಸುತ್ತೇವೆ ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ

Cut-off box - ನಾಮಫಲಕ ಅಳವಡಿಸಿ ‘ಈ ಭವನಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸ್ವಾಗತ ಫಲಕ ಅಳವಡಿಸಬೇಕು. ನಿರ್ವಹಣೆಗೆ ಒಬ್ಬ ಸಿಬ್ಬಂದಿ ನೇಮಿಸಬೇಕು. ಭವನದಲ್ಲಿ ಲಭ್ಯವಿರುವ ಎರಡು ಕೊಠಡಿಗಳ ಪೈಕಿ ಒಂದರಲ್ಲಿ ಗ್ರಂಥಾಲಯ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಇರಿಸಬೇಕು. ಓದುಗರಿಗೆ ದಿನಪತ್ರಿಕೆಗಳ ವ್ಯವಸ್ಥೆ ಮಾಡಬೇಕು’ ಎಂದು ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಸಮಿತಿ ಕಾರ್ಯದರ್ಶಿ ಸುಭಾಷ ಕುಲಕರ್ಣಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.