38 ಪ್ರೌಢಶಾಲೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಈ ಪೈಕಿ 16 ಮಂಜೂರಾಗಿವೆ. ಹಿಂಡಲಗಾ ಅಥವಾ ಮಣ್ಣೂರಿನಲ್ಲಿ ಕನ್ನಡ ಪ್ರೌಢಶಾಲೆ ಆರಂಭಕ್ಕೆ ಪ್ರಯತ್ನಿಸುತ್ತೇವೆ
ಲೀಲಾವತಿ ಹಿರೇಮಠ ಡಿಡಿಪಿಐ ಬೆಳಗಾವಿ
ಎಂಟನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲೇ ಓದಿದ ಮಕ್ಕಳು ಪ್ರೌಢಶಿಕ್ಷಣವನ್ನಷ್ಟೇ ಬೆಳಗಾವಿಯಲ್ಲಿ ಪಡೆದು ಗ್ರಾಮೀಣ ಕೃಪಾಂಕದಿಂದ ವಂಚಿತರಾಗುತ್ತಿದ್ದಾರೆ
ವೈ.ಜಿ.ಕೇಂದ್ರಿ ಪ್ರಭಾರ ಮುಖ್ಯಶಿಕ್ಷಕಿ ಮಣ್ಣೂರ
ನನ್ನ ಮಗನನ್ನು ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿಸಿದ್ದೆ. ಆದರೆ ಪ್ರೌಢಶಿಕ್ಷಣಕ್ಕಾಗಿ ಬೆಳಗಾವಿಗೆ ಹೋಗಲು ತೊಂದರೆಯಾಗುತ್ತದೆ ಎಂದು ಇದೇ ವರ್ಷ ಮರಾಠಿ ಶಾಲೆಗೆ ಸೇರಿಸಿದ್ದೇನೆ
ರಘುನಾಥ ಬಿಜಗರ್ಣಿಕರ ಪಾಲಕ ಕುದ್ರೇಮನಿ
ಹಿಂಡಲಗಾದಲ್ಲಿ ತ್ವರಿತವಾಗಿ ಕನ್ನಡ ಪ್ರೌಢಶಾಲೆ ತೆರೆಯಬೇಕು. ಈ ಕೊರತೆ ಕಾರಣ ಮರಾಠಿಯತ್ತ ಮಕ್ಕಳು ವಾಲಬಾರದು
ಅಶೋಕ ಚಂದರಗಿ ಸದಸ್ಯ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ