ಮಂಗಳವಾರ, ಜೂನ್ 28, 2022
21 °C

ಹಿರೇಬಾಗೇವಾಡಿ | ಕಾರ್ ಡಿಕ್ಕಿ: ಬೈಕ್‌ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಬಾಗೇವಾಡಿ: ಬೈಕ್‌ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಮೀಪದ
ಮುತ್ನಾಳ ಗ್ರಾಮದ ಹೂವಿನ ಹಳ್ಳದ ಬಳಿಯ ರಾಷ್ಟ್ರಿಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಬೆಳಗಾವಿ ಕಡೆಯಿಂದ ಧಾರವಾಡ ಕಡೆ ಸಾಗುತ್ತಿದ್ದ ಕಾರು ಬೈಕ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಮಹಾರಾಷ್ಟ್ರ ಅಹ್ಮಮದನಗರ ಜಿಲ್ಲೆಯ ಭೋಳೆವಸ್ತಿ ಗ್ರಾಮದ ಬೈಕ್ ಸವಾರ ನಿತಿನ ಬಾವುಸಾಹೇಬ ಗಾಡೇಕರ (32) ಮೃತಪಟ್ಟವರು.

ಈ ಬಗ್ಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‌ ಸ್ಪರ್ಶಿಸಿ ಬಾಲಕಿ ಸಾವು
ಬೆಳಗಾವಿ:
ಇಲ್ಲಿನ ವಡಗಾವಿಯ ಆನಂದ ನಗರದ 3ನೇ ಕ್ರಾಸ್‌ ಮನೆಯಲ್ಲಿ ಮಂಗಳವಾರ ವಿದ್ಯುತ್‌ ಸ್ಪರ್ಶಿಸಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಮೃತರನ್ನು ದೇವಾಂಶಿ ಯೋಗೇಂದ್ರ ಚವ್ಹಾಣ(17) ಎಂದು ಗುರುತಿಸಲಾಗಿದೆ.

‘ಸ್ನಾನಕ್ಕೆ ಹೋದಾಗ ಎಲೆಕ್ಟ್ರಿಕಲ್‌ ವಾಟರ್‌ ಹೀಟರ್‌ ತಾಗಿ ಮೃತಪಟ್ಟಿದ್ದಾಳೆ’ ಎಂದು ತಾಯಿ ತೃಪ್ತಿ ಶಹಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು