‘ಶಕ್ತಿ ಯೋಜನೆಯಿಂದ ಆದಾಯ ಬರುತ್ತಿದೆ. 400 ಬಸ್ಸುಗಳನ್ನು ಹೆಚ್ಚಿಗೆ ಖರೀದಿಸಲಾಗಿದೆ. ಹಳೆಯ ಬಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ, ಈಗ ಹೊಸದಾಗಿ 10 ಬಸ್‌ಗಳು ಬಂದಿದ್ದು, ಅವುಗಳ ಪ್ರಾಯೋಗಿಕ ಚಾಲನೆ ನಡೆದಿದೆ. ವಾರದೊಳಗೆ 400 ಬಸ್‌ಗಳು ವಾಯುವ್ಯ ಕರ್ನಾಟಕ ಸಂಸ್ಥೆಗೆ ಬರುತ್ತವೆ. ನಂತರ ಅಥಣಿ, ಕಾಗವಾಡ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟ ಹೀಗೆ ಅವಶ್ಯಕತೆಗೆ ಅನುಗುಣವಾಗಿ ಹಂಚಿಕೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು’ ಎಂದು ರಾಜು ಕಾಗೆ ತಿಳಿಸಿದರು.