ಮಂಗಳವಾರ, ಜನವರಿ 21, 2020
27 °C

ಕೇಂಬ್ರಿಡ್ಜ್‌ ಇಂಗ್ಲಿಷ್ ಪರೀಕ್ಷಾ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ವಿಭಾಗವಾದ ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ ವತಿಯಿಂದ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ಶಿಕ್ಷಣ ಸೊಸೈಟಿಯಲ್ಲಿ ‘ಇಂಗ್ಲಿಷ್ ಪರೀಕ್ಷಾ ಕೇಂದ್ರ’ವನ್ನು ಆರಂಭಿಸಲಾಗಿದೆ.

ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಟಿ.ಕೆ. ಅರುಣಾಚಲಂ, ‘ವಿದ್ಯಾರ್ಥಿಗಳಿಗೆ ಅವರ ಭಾಷೆ ಹಾಗೂ ಸಂವಹನ ಕೌಶಲಗಳನ್ನು ಅಭಿವೃದ್ಧಿಪಡಿಸಲು, ಅಂತರರಾಷ್ಟ್ರೀಯ ಪ್ರಾಶಸ್ತ್ಯ ಪಡೆಯಲು ಬೇಕಾಗುವ ಸಹಾಯ ಮಾಡುವ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ವಿದ್ಯಾಸಂಸ್ಥೆಯು ಕೈಗೊಂಡಿರುವ ಈ ಉಪಕ್ರಮವನ್ನು ನಾವು ಶ್ಲಾಘಿಸುತ್ತೇವೆ’ ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್‌ ಶಿಕ್ಷಣ ಸೊಸೈಟಿಯ ಅಧ್ಯಕ್ಷ ರಾಜ್ ಶ್ಯಾಮ್‌ ಘಾಟಗೆ, ಪ್ರಾಂಶುಪಾಲೆ ಲಕ್ಷ್ಮಿ ಇಂಚಲ, ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಆನಂದ್‌ರಾಜ್‌, ಕನ್ಸಲ್ಟೆಂಟ್ ಡಿ.ಎಸ್. ಭರತ್ ಅಯ್ಯರ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು