ಸವದತ್ತಿ: ನ್ಯಾಯಾಲಯ ಕಲಾಪದ ವೇಳೆಯೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆದ ದೇಶ ದ್ರೋಹಿ ವಕೀಲನ ಕೃತ್ಯ ಖಂಡಿಸಿ ಇಲ್ಲಿನ ಎಸ್ಎಲ್ಏಓ ಕ್ರಾಸ್ನಿಂದ ತಮಟೆ ಬಡಿದು ಪಾದಯಾತ್ರೆಯ ಮೂಲಕ ಪ್ರತಿಭಟಿಸಿ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ವಿವಿಧ ದಲಿತ ಸಂಘಟನೆಗಳ ಜಂಟಿ ಕ್ರಿಯಾ ಹೋರಾಟ ಸಮಿತಿಯಿಂದ ತಹಶೀಲ್ದಾರ ಎಮ್.ಎನ್. ಹೆಗ್ಗಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡ ಎಲ್.ಎಸ್. ನಾಯಕ ಮಾತನಾಡಿ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ರಾಕೇಶ್ ಕಿಶೋರ ಕೃತ್ಯ ಭಾರತ ಸಂವಿಧಾನದ ತಳಹದಿಯಲ್ಲಿ ಜೀವಿಸುತ್ತಿರುವ ಎಲ್ಲ ಭಾರತೀಯರಿಗೂ ಮಾಡಿದ ಘೋರ ಅವಮಾನವಾಗಿದೆ. ಇದು ಅಕ್ಷಮ್ಯ ಖಂಡನಾರ್ಹ. ಸನಾತನ ಧರ್ಮದ ಮೇಲಿನ ಅವಮಾನವನ್ನು ಸಹಿಸಲಾರೆ ಎಂದು ಹೇಳುವ ವಕೀಲನ ಹೇಳಿಕೆ ಅತ್ಯಂತ ಆಘಾತಕಾರಿ ವಿಷಯವೆಂದು ಕಳವಳ ವ್ಯಕ್ತ ಪಡಿಸಿದ ಅವರು, ಇಂಥÀವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು. ಕ್ಷಮಾದಾನ ದೊರೆತಲ್ಲಿ ಆ ಔದಾರ್ಯ ಭವಿಷ್ಯದಲ್ಲಿ ಆರೋಪಿಗಳಿಗೆ ಅನುಕೂಲ ಕಲ್ಪಿಸುವ ಸಾಧ್ಯತೆಗಳಾಗಬಹುದು ಎಂದರು.

ದಲಿತ ಮುಖಂಡ ಬಸವರಾಜ ತಳವಾರ ಮಾತನಾಡಿ, ಸಿಜೆಐ ಬಿ.ಆರ್. ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕಿವೆ. ದೇಶದ ಸರ್ವ ಶ್ರೇಷ್ಠ ಹುದ್ದೆಯಾಗಿರುವ ಸಿಜೆಐ ಇದಕ್ಕೆ ಪಕ್ಷ, ಧರ್ಮದ ಬೇಧವಿಲ್ಲ. ಸಿಜೆಐ ಮೇಲಿನ ದಾಳಿಯಲ್ಲ ಇದು ನೇರವಾಗಿ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಡೆದ ದಾಳಿ ಎಂದು ಆಕ್ರೋಶಿಸಿದರು.

ಮಂಜುನಾಥ ಪಾಚಂಗಿ, ಮಹಾದೇವ ಬಡ್ಲಿ, ಅರುಣ ಹಲಕಿ, ಯಲ್ಲಪ್ಪ ಕುಲುಮನಟ್ಟಿ, ಪ್ರಕಾಶ್ ಮಲ್ಲೂರ, ಎಫ್.ವೈ. ಗಾಜಿ ಕೃಷ್ಣ ಮಲ್ಲೂರ, ರಾಘವೇಂದ್ರ ಪೂಜಾರ, ನಾಗಪ್ಪ ಬಡೆಪ್ಪನವರ, ಆಕಾಶ ಮಾದರ ಹಾಗೂ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.