ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಮಂಗಳವಾರ ಸೇನಾ ವಾಹನವು ಕಂದಕಕ್ಕೆ ಉರುಳಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಇಬ್ಬರು ಯೋಧರಿಗೆ, ಇಲ್ಲಿನ ಮರಾಠಿ ಲಘುಪದಾತಿ ದಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಅಂತಿಮ ನಮನ ಸಲ್ಲಿಸಿದರು.
.ಜಮ್ಮು ಮತ್ತು ಕಾಶ್ಮೀರ: ರಸ್ತೆ ಅಪಘಾತದಲ್ಲಿ ಐವರು ಯೋಧರು ಮೃತ.
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ(45), ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿಯ ಮಹೇಶ ನಾಗಪ್ಪ ಮರಿಗೊಂಡ (25) ಅವರಿಗೆ ಗೌರವ ಸಲ್ಲಿಸಿದರು.

ಮೃತ ಯೋಧರ ಕುಟುಂಬದವರಿಗೆ ಸಾಂತ್ವನ ಹೇಳಿದರು.
.ಕುಂದಾಪುರ: ಬೀಜಾಡಿಯ ಯೋಧ ಹುತಾತ್ಮ; ಮಡುಗಟ್ಟಿದ ಶೋಕ.
ಸಚಿವರಾದ ಎಚ್.ಸಿ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳಕರ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಸೇನಾಧಿಕಾರಿಗಳು ಮತ್ತು ಮಾಜಿ ಸೈನಿಕರ ಸಂಘಟನೆಯವರು ಹಾಜರಿದ್ದರು.

ನಂತರ ಯೋಧರ ಸ್ವಗ್ರಾಮಗಳಿಗೆ ಪಾರ್ಥಿವ ಶರೀರಗಳನ್ನು ಕಳುಹಿಸಲಾಯಿತು. ಅಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
.ಜಮ್ಮುವಿನ ಪೂಂಛ್ ಬಳಿ ಸೇನಾ ವಾಹನ ಅಪಘಾತ: ಕರ್ನಾಟಕದ ಮೂವರು ಯೋಧರ ಸಾವು.

ದೇಶದ ರಕ್ಷಣೆ ಮಾಡುತ್ತಿದ್ದ ಯೋಧರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಸರ್ಕಾರದಿಂದ ಅವರ ಕುಟುಂಬದವರಿಗೆ ನಿಯಮಾನುಸಾರವಾಗಿ ಪರಿಹಾರ ನೀಡಲಾಗುವುದು
ಸಿದ್ದರಾಮಯ್ಯ , ಮುಖ್ಯಮಂತ್ರಿ
.ಮಣಿಪುರದಲ್ಲಿ ಸೇನಾ ವಾಹನ ಅಪಘಾತ: ಬೆಳಗಾವಿ ಜಿಲ್ಲೆಯ ಕುಪ್ಪನವಾಡಿ ಯೋಧ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.