ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಲಸಿಕಾ ಅಭಿಯಾನಕ್ಕೆ ಲಕ್ಷ್ಮಿ ಚಾಲನೆ

Last Updated 6 ಜುಲೈ 2021, 13:20 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಹಿಂಡಲಗಾ ಮತ್ತು ಬೆಳಗುಂದಿ ಗ್ರಾಮದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಚಾಲನೆ ನೀಡಿದರು.

‘ಕೋವಿಡ್ 2ನೇ ಅಲೆ ಪ್ರಸ್ತುತ ನಿಯಂತ್ರಣಕ್ಕೆ ಬಂದಿದೆ. ಆದರೆ, ನಾವು ಮೈಮರೆಯುವುದ ಬೇಡ. ಎಚ್ಚರಿಕೆಯಿಂದಿದ್ದು, 3ನೇ ಅಲೆ ಬಾರದಂತೆ ತಡೆಯಬೇಕು. ಅನಿವಾರ್ಯತೆ ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್ ಲಸಿಕೆ ಬಗ್ಗೆ ಕೆಲವರಿಗೆ ಭಯವಿದೆ. ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದು ಸಲ್ಲದು. ಭಯ ಪಡದೆ ತೆಗೆದುಕೊಂಡು ಆದಷ್ಟು ಸೋಂಕಿನಿಂದ ದೂರವಿರಬೇಕು. ಚಿಕ್ಕಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು’ ಎಂದು ತಿಳಿಸಿದರು.

ಡಾ.ರಾಮಕೃಷ್ಣ, ಅಶೋಕ ಗೌಡ, ಹೇಮಾ ಹಡಗಳ, ಬಾಲಕೃಷ್ಣ ಲೋಹಾರ, ಗೀತಾ ದೇಕೊಳ್ಕರ, ಪ್ರಲ್ಹಾದ ಚಿರಮುರ್ಕರ, ಸೋಮನ ಗೌಡ, ಅಶ್ವಿನಿ ಕುಂದಲ, ಟಿಎಚ್‌ಒ ಡಾ.ಶಿವಾನಂದ ಮಾಸ್ತಿಹೊಳಿ, ಡಾ.ರಾಜು ಕುಪ್ಳೆಕರ, ಕೃಷ್ಣ ಪಾವಸೆ, ಪ್ರಕಾಶ ಬೆಳಗುಂದಕರ, ವಿಠ್ಠಲ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT