ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕುಮಾರ ಪ್ರತಿಮೆ ನಿರ್ಮಾಣಕ್ಕೆ ಅನುಮತಿಗೆ ಆಗ್ರಹ

Last Updated 7 ಸೆಪ್ಟೆಂಬರ್ 2021, 15:43 IST
ಅಕ್ಷರ ಗಾತ್ರ

ಬೆಳಗಾವಿ: ‘ಗಡಿ ಜಿಲ್ಲೆ ಬೆಳಗಾವಿಗೂ ವರನಟ ರಾಜಕುಮಾರ ಅವರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಇಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು’ ಎಂದು ಆಗ್ರಹಿಸಿ ‘ಅಖಿಲ ಕರ್ನಾಟಕ ಕರ್ನಾಟಕ ರತ್ನ ರಾಜಕುಮಾರ ಹಾಗೂ ಶಿವರಾಜ್ ಕುಮಾರ ಮತ್ತು ರಾಜರತ್ನ ಪುನೀತ್‌ ರಾಜಕುಮಾರ ಅಭಿಮಾನಿ ಬಳಗ’ದಿಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ನಗರದ ಕೋಟೆ ಕೆರೆ ಬಳಿಯ ಅಶೋಕ ವೃತ್ತದಲ್ಲಿ ವರನಟ ರಾಜಕುಮಾರ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಹಲವು ವರ್ಷಗಳಿಂದ‌ ಕನಸು ಕಂಡಿದ್ದೇವೆ. ಅವರ ಆದರ್ಶ ಜೀವನ‌ ಇಂದಿನ ಪೀಳಿಗೆಗೆ ಮಾದರಿ ಆಗಲಿ ಎಂಬ ಉದ್ದೇಶದಿಂದ ಪ್ರತಿಮೆ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಗಡಿ ಜಿಲ್ಲೆ‌ ಬೆಳಗಾವಿಯಲ್ಲಿ ರಾಜಕುಮಾರ ಅವರ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ಅವರ ಸಾಮಾಜಿಕ‌ ಹಾಗೂ ಧಾರ್ಮಿಕ ಚಲನಚಿತ್ರಗಳು ಅನೇಕರ ಜೀವನ ರೂಪಿಸಿವೆ. ಅನೇಕ‌ ಚಿತ್ರಗಳ ಮೂಲಕ ಅವರು ಜನಮಾನಸದಲ್ಲಿ ಉಳಿದಿದ್ದಾರೆ’ ಎಂದರು.

ಅಭಿಮಾನಿ ಬಳಗದ ಅಧ್ಯಕ್ಷ ಶೇಖರ ಕಾಲೇರಿ, ಪದಾಧಿಕಾರಿಗಳಾದ ರವಿ ತಳೇಮನಿ, ಶಿವಕುಮಾರ ತಳವಾರ, ಪರುಶರಾಮ ಪಾಟೀಲ, ಸಚಿನ್ ಬಡಿಗೇರ, ಸದಾಶಿವ ಬಾರಿಮರದ, ಈರಾ ಅನಗೋಳಕರ, ಪ್ರಕಾಶ ಮೇತ್ರಿ, ರಮೇಶ ಬಾದಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT