ಸೋಮವಾರ, ಡಿಸೆಂಬರ್ 5, 2022
25 °C

ದುರ್ಗಾ ಪರಮೇಶ್ವರಿ ಮೂರ್ತಿ ಮೆರವಣಿಗೆ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಹಂದಿಗುಂದ: ರಾಯಬಾಗ ತಾಲ್ಲೂಕಿನ ಸವಸುದ್ದಿಯಲ್ಲಿ ಮಹಾನವಮಿ ಅಂಗವಾಗಿ ದುರ್ಗಾ ಪರಮೇಶ್ವರಿ ಮೂರ್ತಿ ಮೆರವಣಿಗೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.

ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಮನ ಸೆಳೆಯಿತು. ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಶಿವಯ್ಯ ಮಠಪತಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಪರಮಾನಂದವಾಡಿಯ ಬ್ರಹ್ಮಾನಂದ ಆಶ್ರಮದ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ತವಗ ಮಠದ ಬಾಳಯ್ಯ ಸ್ವಾಮೀಜಿ, ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಸತ್ಯಗೌಡ ಪಾಟೀಲ, ಉಪಾಧ್ಯಕ್ಷ ರಮೇಶ ಮಾಂಗ, ಕಾರ್ಯದರ್ಶಿ ಕಾಂತೇಶ ಅಂಕಲೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಧರೆಪ್ಪ ಮುತ್ನಾಳ, ಅಜ್ಜಪ್ಪಗೌಡ ಪಾಟೀಲ, ಶ್ರೀಮಂತಗೌಡ ಪಾಟೀಲ, ನಿಂಗಯ್ಯ ಮಠಪತಿ, ರಾಮಣ್ಣ ನಾಯಕ, ನಾಗಪ್ಪ ನವಲಿಹಾಳ, ದಿಲೀಪ ಅಂಕಲೆ, ರಾಮನಗೌಡ ಪಾಟೀಲ, ರವಿ ದೇವರಮನಿ, ಮಂಜು ದೇವರಮನಿ, ಲಕ್ಷ್ಮಣ ಕೋಳಿಕಾರ, ಲಕ್ಷ್ಮಣ ಬೆಳಕುಡ, ಪ್ರಕಾಶ ಪೂಜಾರಿ, ಯಶವಂತ ಮಾಂಗ, ಶಿವಾನಂದ ಹಾದಿಮನಿ, ಸತ್ಯಪ್ಪ ಮಾಂಗ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು