ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ‘ಸುಲಲಿತ ಜೀವನ’ ಹೇಗಿದೆ? ಅಭಿಪ್ರಾಯ ತಿಳಿಸಿ ಫೆ.29ರೊಳಗೆ

Last Updated 1 ಫೆಬ್ರುವರಿ 2020, 9:53 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ‘ಸುಲಲಿತ ಜೀವನ (ಇಸ್‌ ಆಫ್‌ ಲಿವಿಂಗ್‌)’ ಹೇಗಿದೆ ಎನ್ನುವ ಕುರಿತು ಜನರು ತಮ್ಮ ಅಭಿಪ್ರಾಯವನ್ನು ಇದೇ ತಿಂಗಳ 29ರೊಳಗೆ ವೆಬ್‌ಸೈಟ್‌ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಬಹುದು’ ಎಂದು ಬೆಳಗಾವಿ ಸ್ಮಾರ್ಟ್‌ ಸಿಟಿಯ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ನಗರಗಳಲ್ಲಿರುವ ‘ಸುಲಲಿತ ಜೀವನ’ ಕುರಿತು ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸ್ಥಳೀಯ ನಗರಾಡಳಿತ, ವಿವಿಧ ಇಲಾಖೆಗಳ ಮೂಲಕ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲು ಬಯಸಿದೆ’ ಎಂದರು.

‘ಜನರು ನೀಡುವ ಅಭಿಪ್ರಾಯಗಳ ಮೇಲೆ ಉತ್ತಮ ನಗರಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ಕೇಂದ್ರ ತಯಾರಿಸಲಿದೆ. 2017ರಲ್ಲಿ ಇಂತಹದ್ದೇ ಸಮೀಕ್ಷೆಯನ್ನು ನಡೆಸಲಾಗಿತ್ತು. ದೇಶದ 100 ಸ್ಮಾರ್ಟ್‌ ಸಿಟಿಗಳ ಪೈಕಿ ಆಗ ಬೆಳಗಾವಿಗೆ 52ನೇ ಸ್ಥಾನ ದೊರೆತಿತ್ತು. ರಾಜ್ಯ ಪಟ್ಟಿಯಲ್ಲಿ 2ನೇ ಸ್ಥಾನ ಸಿಕ್ಕಿತ್ತು. ಮೊದಲ ಸ್ಥಾನವು ಮಂಗಳೂರು (ರಾಷ್ಟ್ರೀಯ ಪಟ್ಟಿಯಲ್ಲಿ 41ನೇ ಸ್ಥಾನ) ಪಾಲಾಗಿತ್ತು. ಹೆಚ್ಚೆಚ್ಚು ಜನರು ಅಭಿಪ್ರಾಯ ವ್ಯಕ್ತಪಡಿಸಿದರೆ, ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬೆಳಗಾವಿಗೆ ಅತ್ಯುನ್ನತ ಸ್ಥಾನ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಶಿಕ್ಷಣ, ಆರೋಗ್ಯ, ವಸತಿ ಮತ್ತು ಆಶ್ರಯ, ಘನ ತ್ಯಾಜ್ಯ ನಿರ್ವಹಣೆ, ಸುರಕ್ಷತೆ– ಭದ್ರತೆ, ಮನರಂಜನೆ, ಆರ್ಥಿಕ ಅಭಿವೃದ್ಧಿಯ ಮಟ್ಟ, ಆರ್ಥಿಕ ಅವಕಾಶ, ಪರಿಸರ ಸೇರಿದಂತೆ 97 ಅಂಶಗಳ ಕುರಿತು ಪ್ರಶ್ನಾವಳಿಗಳು ಇರುತ್ತವೆ. ಇವುಗಳ ಬಗ್ಗೆ ಜನರು ಅಭಿಪ್ರಾಯ ವ್ಯಕ್ತಪಡಿಸಬೇಕಾಗಿದೆ’ ಎಂದು ತಿಳಿಸಿದರು.

‘ಸುಲಲಿತ ಜೀವನದ ಜೊತೆಗೆ ಪುರಸಭೆಯ ಸೇವೆಗಳ ಕುರಿತು ಇದೇ ಮೊದಲ ಬಾರಿಗೆ ಸಮೀಕ್ಷೆ ಆರಂಭಿಸಿದೆ. ಸುಮಾರು 151 ಅಂಶಗಳ ಬಗ್ಗೆ ಜನರ ಅಭಿಪ್ರಾಯವನ್ನು ಬಯಸಿದೆ’ ಎಂದರು.

‘ಅಭಿಪ್ರಾಯ ವ್ಯಕ್ತಪಡಿಸಲು, ವೆಬ್‌ಸೈಟ್‌ http://eol2019.org/CitizenFeedback,ಫೇಸ್‌ಬುಕ್‌ @easeofliving2019,ಟ್ವಿಟ್ಟರ್‌ @easeofliving19 , @MoHUA , @SmartCitiesMission ಸಂಪರ್ಕಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT