ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಕಾರ್ಯಗಳಿಗೆ ಒತ್ತು: ಜೊಲ್ಲೆ

Published 5 ಮಾರ್ಚ್ 2024, 13:14 IST
Last Updated 5 ಮಾರ್ಚ್ 2024, 13:14 IST
ಅಕ್ಷರ ಗಾತ್ರ

ನಿಪ್ಪಾಣಿ: ‘ಶಿಕ್ಷಣ ಪ್ರತಿಯೊಬ್ಬರಿಗೂ ಪ್ರಮುಖವಾದದ್ದು. ಕ್ಷೇತ್ರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅವರ ಸಮೀಪವೇ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ಯಮಗರ್ಣಿ ಗ್ರಾಮದಲ್ಲಿ ₹1.13 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಸರ್ಕಾರಿ ಪ್ರೌಢಶಾಲೆ, ₹28 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಸರ್ಕಾರಿ ಶಾಲೆಯ ಎರಡು ಕೊಠಡಿಗಳು, ₹16 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಹೈಟೆಕ್ ಅಂಗನವಾಡಿ ಕಟ್ಟಡಗಳ ಲೋಕಾರ್ಪಣೆ ಹಾಗೂ ₹5 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಸ್ವಾಮಿ ಸಮರ್ಥ ಸಮುದಾಯ ಭವನದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಹೈಟೆಕ್ ಅಂಗನವಾಡಿ ಕಟ್ಟಡಗಳು, ಸರ್ಕಾರಿ ಶಾಲೆಗಳಿಗೆ ಕಟ್ಟಡಗಳ ನಿರ್ಮಾಣ, ಪದವಿ ಮಹಾವಿದ್ಯಾಲಯಗಳ, ಐಟಿಐ ಮಹಾವಿದ್ಯಾಲಯಗಳ ಸ್ಥಾಪನೆ ಮೊದಲಾದ ಶಿಕ್ಷಣಕ್ಕೆ ಪೂರಕ ಕಾರ್ಯಗಳಿಗೆ ಒತ್ತು ನೀಡಲಾಗಿದೆ’ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಕೆ.ಡಿ. ಕುಂಭಾರ, ಸುನೀಲ ಸಂಕಪಾಳ, ಸೃಷ್ಟಿ ಕುಂಭಾರ ಮಾತನಾಡಿದರು.
ಸಿಡಿಪಿಒ ರಾಮಮೂರ್ತಿ ಕೆ.ವಿ., ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಪಿಡಿಒ ಅಶ್ಫಾಖ್ ಶೇಖ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಗರ ದೇಸಾಯಿ, ಉಪಾಧ್ಯಕ್ಷೆ ಅರ್ಚನಾ ಚವಾಣ, ಕಾರ್ಖಾನೆಯ ಸಂಚಾಲಕ ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ನಾಸೀರಖಾನ ಇನಾಮದಾರ, ರಾಜು ಸುತಾರ, ಪಿಂಟು ಪವಾರ, ಮುಖ್ಯ ಶಿಕ್ಷಕ ಅರವಿಂದ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT