ಬೆಳಗಾವಿ: ‘ನಗರದ ಗಜಾನನರಾವ್ ಭಾತ್ಕಂಡೆ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಕೇಂಬ್ರಿಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 2021–22ನೇ ಶೈಕ್ಷಣಿಕ ವರ್ಷಕ್ಕೆ 200 ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು’ ಎಂದು ಅಧ್ಯಕ್ಷ ಮಿಲಿಂದ್ ಭಾತ್ಕಂಡೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಕೊರೊನಾದಿಂದಾಗಿ ಅನೇಕ ಪೋಷಕರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಅಂಥವರಿಗೆ ನೆರವಾಗಲು ಉಚಿತ ಪ್ರವೇಶ ಕೊಡಲು ನಿರ್ಧರಿಸಲಾಗಿದೆ. ಪೋಷಕರು ಪ್ರವೇಶ ಖಚಿತಪಡಿಸಬೇಕು. ಹಲವು ವರ್ಷಗಳಿಂದ ಎಲ್ಲ ಸಮುದಾಯದ ಬಡ ಮತ್ತು ವಿಧವೆಯರ 10 ಮಕ್ಕಳಿಗೆ ಪ್ರತಿ ವರ್ಷ ಶಾಲೆಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಈ ಬಾರಿ ಕೊರೊನಾ ಬಿಕ್ಕಟ್ಟಿನಿಂದಾಗಿ 200 ಮಕ್ಕಳಿಗೆ ವಿಸ್ತರಿಸಲಾಗಿದೆ’ ಎಂದಿದ್ದಾರೆ.

‘ಎಸ್‌ಪಿಎಂ ರಸ್ತೆಯಲ್ಲಿರುವ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗೆ 110 ಮತ್ತು ಖಾಸಬಾಗ್‌ನ ಶಿಕ್ಷಕರ ಕಾಲೊನಿಯಲ್ಲಿರುವ ಕೇಂಬ್ರಿಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿಗೆ ತಲಾ 30 ಮಕ್ಕಳಿಗೆ ಉಚಿತವಾಗಿ ಪ್ರವೇಶ ಇದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 8884017645 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.