ಗೋಕಾಕ: ತಾಲ್ಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಈಚೆಗೆ ಒಂದೇ ದಿನ ಮೂರು ಮನೆಗಳಲ್ಲಿ ಕಳವು ಮಾಡಲಾಗಿದೆ.

ಮನೆಯೊಂದರ ಬಾಗಿಲ ಕೀಲಿ ಮುರಿದ ಕಳ್ಳರು, ತಿಜೋರಿ ಕೀಲಿ ಮುರಿದು 77.5 ಗ್ರಾಂ ತೂಕದ ಚಿನ್ನದ ಆಭರಣ ಮತ್ತು ₹80 ಸಾವಿರ ಕಳ್ಳತನ ಮಾಡಿದ ಘಟನೆ ಈಚೆಗೆ ನಡೆದಿದೆ. ಮನೆಯ ಮಾಲೀಕರು ನೀಲಕಂಠ ಈರಪ್ಪ ಹಟ್ಟಿ ಎಂಬುವವರು ನೀಡಿದ ದೂರನ್ನು ಆಧರಿಸಿ ಗೋಕಾಕ ಗ್ರಾಮೀಣ ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನೊಂದೆಡೆ, ಇದೇ ಗ್ರಾಮದ ರೇಣುಕಾ ಪಾಂಡಪ್ಪ ಚೂನನ್ನವರ ಎಂಬುವವರಿಗೆ ಸೇರಿದ 20 ಗ್ರಾಂ ಚಿನ್ನದ ಆಭರಣ ಮತ್ತು ₹60 ನಗದು ಹಾಗೂ ಅವರ ಸಹೋದರಿ ಭಾರತಿ ಲಕ್ಕಪ್ಪ ಬಂಗೆನ್ನವರ ಅವರ ₹80 ಸಾವಿರ ನಗದು ಕಳ್ಳತನ ಮಾಡಲಾಗಿದೆ.

ಈ ಕುರಿತು ರೇಣುಕಾ ಪಾಂಡಪ್ಪ ಚೂನನ್ನವರ ಎಂಬುವವರು ಸಲ್ಲಿಸಿದ ದೂರನ್ನು ದಾಖಲಿಸಿಕೊಂಡಿರುವ ಗೋಕಾಕ ಗ್ರಾಮೀಣ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.