ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

1.25 ಲಕ್ಷ ಜನರಿಂದ ಮಾನವ ಸರಪಳಿ

ವಿಶ್ವ ಪ್ರಜಾಪ್ರಭುತ್ವ ದಿನ: ಸೆ.15ರಂದು ವಿಶ್ವದಾಖಲೆ ಸೃಷ್ಟಿ ಸಾಧ್ಯತೆ
Published : 12 ಸೆಪ್ಟೆಂಬರ್ 2024, 15:53 IST
Last Updated : 12 ಸೆಪ್ಟೆಂಬರ್ 2024, 15:53 IST
ಫಾಲೋ ಮಾಡಿ
Comments

ಬೆಳಗಾವಿ: ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಬೆಳಿಗ್ಗೆ 9.30ರಿಂದ 10.30ರವರೆಗೆ 135 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಗುವುದು. ಅಂದಾಜು 1.25 ಲಕ್ಷ ಜನ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಿಲ್ಲೆಯ ಜನ ಕಾರ್ಯಕ್ರಮ ಯಶಸ್ವಿಗೊಳಿಸಲು ಕೈ ಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ತಿಳಿಸಿದರು.

‘ಭಾರತದ ಸಂವಿಧಾನ ವಿಶ್ವಶ್ರೇಷ್ಠವಾದುದು. ಅದರ ಆದರ್ಶಗಳನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ. ಜನರಲ್ಲಿ ಸಾಂವಿಧಾನಿಕ ಹಕ್ಕು– ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಚಾಮರಾಜ ನಗರದವರೆಗೆ 30 ಜಿಲ್ಲೆಗಳಲ್ಲಿ ಒಟ್ಟು 2,500 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗುವುದು. ಜಿಲ್ಲೆಯಲ್ಲಿ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಿಂದ ಆರಂಭವಾಗಿ, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತೇಗೂರವರೆಗೆ ಒಬ್ಬರಿಗೊಬ್ಬರು ಕೈ ಜೋಡಿಸಿ ನಿಲ್ಲಲಾಗುವುದು’ ಎಂದರು.

‘ಸಾಲಹಳ್ಳಿಯಿಂದ ಕೆ.ಚಂದರಗಿ ಅಲ್ಲಿಂದ ಸವದತ್ತಿ ತಾಲ್ಲೂಕಿನ ಸೋಪಡ್ಲ್, ಯರಗಟ್ಟಿ, ಇಂಚರಲ ಕ್ರಾಸ್, ಬೈಲಹೊಂಗಲ ತಾಲ್ಲೂಕಿನ ನೇಸರಗಿ ಕ್ರಾಸ್, ಸುತಗಟ್ಟಿ ಕ್ರಾಸ್, ಬೆಳಗಾವಿ ತಾಲ್ಲೂಕಿನ ಕರಡಿಗುದ್ದಿ, ಸಾಂಬ್ರಾ, ಬೆಳಗಾವಿ ನಗರ, ಸುವರ್ಣ ವಿಧಾನ ಸೌಧ, ಹಿರೇಬಾಗೆವಾಡಿ, ಎಂ.ಕೆ.ಹುಬ್ಬಳ್ಳಿ, ಇಟಗಿ ಕ್ರಾಸ್, ಚನ್ನಮನ ಕಿತ್ತೂರು ಮಾರ್ಗವಾಗಿ ತೇಗೂರವರೆಗೆ ಸರಪಳಿ ಏರ್ಪಡಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಮಾತನಾಡಿ, ‘ಶಾಲೆ, ಕಾಲೇಜು ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ನೌಕರರು, ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಆಯಾ ತಹಶೀಲ್ದಾರ್‌ ನೇತೃತ್ವದಲ್ಲಿ ವಿವಿಧ ಸಮಿತಿ ರಚಿಸಲಾಗಿದೆ. ಯಾರು ಎಲ್ಲಿಗೆ ಬರಬೇಕು, ಎಲ್ಲಿಂದ ಪ್ರಯಾಣ ಮಾಡಬೇಕು ಎಂದು ನಿರ್ಧರಿಸುತ್ತಾರೆ. ಖಾಸಗಿ ಶಾಲೆಗಳ ವಾಹನ, ಸರ್ಕಾರಿ ಬಸ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಆಸಕ್ತರು ತಮ್ಮ ವಾಹನಗಳಲ್ಲೇ ಬರಬಹುದು’ ಎಂದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT