ರಾಮದುರ್ಗ: ‘ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯವನ್ನು ಮಾಡುವ ವರದಿಗಾರ ನಿಜವಾದ ಪತ್ರಕರ್ತನೆಂದು ಗುರುತಿಸಲ್ಪಡುತ್ತಾನೆ’ ಎಂದು ಟಿಬೇಟ್ ಸಮರ್ಥಕ ಸಮೂಹ ಸಂಘಟನೆಯ ರಾಷ್ಟ್ರೀಯ ಸಹ ಸಂಯೋಜಕ ಅಮೃತ ಜೋಶಿ ಹೇಳಿದರು.

ಶುಕ್ರವಾರ ರಾಮದುರ್ಗದಲ್ಲಿ ಬೆಳಗಾವಿಯ ಜನ ಕಲ್ಯಾಣ ಟ್ರಸ್ಟ್ ಆಯೋಜಿಸಿದ್ದ ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ಅಂಗವಾಗಿ ಪತ್ರಕರ್ತರ ಸನ್ಮಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅಂದು ಮೂರು ಲೋಕಗಳ ಆಗುಹೋಗುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ನಾರದ. ಆದರೆ ಇಂದು ಪತ್ರಕರ್ತರು ಜನರಿಗೆ ನಿತ್ಯದ ವಿಷಯಗಳನ್ನು ತಿಳಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದರು.

ಪತ್ರಕರ್ತರಾದವರು ನಾರದ ಮುನಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪತ್ರಕರ್ತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನ ಕಲ್ಯಾಣ ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯ ಪರಮೇಶ್ವರ ಹೆಗಡೆ ಮಾತನಾಡಿ, ‘ಪತ್ರಕರ್ತರು ನಿತ್ಯ ಅಧ್ಯಯನ ಮಾಡುತ್ತಿರಬೇಕು ಅಂದರೆ ಮಾತ್ರ ಸೋಶಿಯಲ್ ಮಿಡಿಯಾ ಯುಗದಲ್ಲಿ ಪೈಪೋಟಿ ನೀಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತ ಗೋವಿಂದ ಮೊಡಕ, ಪತ್ರಿಕಾ ವಿತರಕ ಮಧು ಬನ್ನೂರ ಅವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿ ಆಗಮಿಸಿದ್ದ ಪ್ರೆಸ್ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಧೂಪದ ಮಾತನಾಡಿದರು. ಮಲ್ಲಿಕಾರ್ಜುನ ಭಾವಿಕಟ್ಟಿ ಸ್ವಾಗತಿಸಿದರು. ಸಂಗಮೇಶ ಉದುಪುಡಿ ನಿರೂಪಿಸಿದರು. ಅರುಣ ಹೊಸಮಠ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.