ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ ನದಿ; ತೇಲಿಹೋಗಿದ್ದ ಯುವಕನ ಶವ ಪತ್ತೆ

Published : 4 ಆಗಸ್ಟ್ 2024, 13:40 IST
Last Updated : 4 ಆಗಸ್ಟ್ 2024, 13:40 IST
ಫಾಲೋ ಮಾಡಿ
Comments

ಬೆಳಗಾವಿ: ತಾಲ್ಲೂಕಿನ ಬಿ.ಕೆ. ಕಂಗ್ರಾಳಿಯಲ್ಲಿ ಶನಿವಾರ ರಾತ್ರಿ ಮಾರ್ಕಂಡೇಯ ನದಿಗೆ ಬೈಕ್‌ ಬಿದ್ದು, ಪ್ರವಾಹದಲ್ಲಿ ತೇಲಿಹೋಗಿದ್ದ ಯುವಕನ ಶವ ಭಾನುವಾರ ಪತ್ತೆಯಾಗಿದೆ.

ತಾಲ್ಲೂಕಿನ ಅಳತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23) ಮೃತ ಯುವಕ. ನದಿಗೆ ಬಿದ್ದ ಸ್ಥಳದಿಂದ ತುಸು ದೂರದಲ್ಲೇ ಯುವಕನ ಶವ ಪತ್ತೆಯಾಗಿದೆ.

ಅಳತಗಾ ಗ್ರಾಮದ ಓಂಕಾರ ಹಾಗೂ ಜ್ಯೋತಿನಾಥ ಸಹೋದರರು ಕ್ಷೌರ ಮಾಡಿಸಲು ಶನಿವಾರ ರಾತ್ರಿ ಕಂಗ್ರಾಳಿಗೆ ಹೊರಟಿದ್ದರು. ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ ನದಿ ದಡದಲ್ಲಿ ಸಾಗುವಾಗ ಬೈಕ್‌ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿತ್ತು. ಇಬ್ಬರೂ ಸಹೋದರರು ನದಿ ಸೆಳೆತಕ್ಕೆ ತೇಲಿಹೋಗಿದ್ದರು. ಜ್ಯೋತಿನಾಥ್‌ ಈಜಿ ದಡ ಸೇರಿದ್ದರು. ಕಾಣೆಯಾಗಿದ್ದ ಓಂಕಾರ ಶವವಾಗಿ ಪತ್ತೆಯಾಗಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಡಿಸಿಪಿ ಪಿ.ವಿ.ಸ್ನೇಹಾ ಸ್ಥಳದಲ್ಲೇ ಇದ್ದು ಕಾರ್ಯಾಚರಣೆ ನೋಡಿಕೊಂಡರು.

ನದಿಗಳ ಮಟ್ಟ ಯಥಾಸ್ಥಿತಿ: ಜಿಲ್ಲೆಯಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಆದರೆ, ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮತ್ತೆ ಧಾರಾಕಾರವಾಗಿ ಸುರಿಯುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್‌ನಲ್ಲಿ ಭಾನುವಾರ ಕೂಡ 2.89 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರು ನಿರಂತರ ಹರಿಯುತ್ತಿದೆ. ಜಿಲ್ಲೆಯ ಎಲ್ಲ 44 ಕಾಳಜಿ ಕೇಂದ್ರಗಳಲ್ಲಿ 4,905 ಮಂದಿ ಆಶ್ರಯ ಪಡೆದಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಾಲಯ ಕೃಷ್ಣಾ ನದಿ ನೀರಿನಿಂದ ಕಳೆದ ಒಂದು ವಾರದಿಂದ ಜಲಾವೃತವಾಗೊಂಡ ಸ್ಥಿತಿಯಲ್ಲಿಯೇ ಇದೆ

ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಾಲಯ ಕೃಷ್ಣಾ ನದಿ ನೀರಿನಿಂದ ಕಳೆದ ಒಂದು ವಾರದಿಂದ ಜಲಾವೃತವಾಗೊಂಡ ಸ್ಥಿತಿಯಲ್ಲಿಯೇ ಇದೆ

– ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್. ಚಿನಕೇಕರ

ಚಿಕ್ಕೋಡಿ ತಾಲ್ಲೂಕಿನ ಹುಲಗಬಾಳಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳಲ್ಲಿ ಮೊಳಕಾಲುದ್ದ ನೀರು ಕಳೆದ ಒಂದು ವಾರದಿಂದ ಕಟ್ಟಿಕೊಂಡಿದೆ. ಇದರಿಂದ ಕಬ್ಬು ಕೊಳೆಯುವ ಆತಂಕ ಎದುರಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಹುಲಗಬಾಳಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳಲ್ಲಿ ಮೊಳಕಾಲುದ್ದ ನೀರು ಕಳೆದ ಒಂದು ವಾರದಿಂದ ಕಟ್ಟಿಕೊಂಡಿದೆ. ಇದರಿಂದ ಕಬ್ಬು ಕೊಳೆಯುವ ಆತಂಕ ಎದುರಾಗಿದೆ.

–ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್. ಚಿನಕೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT