ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ರಕ್ಷಣೆಗೆ ಕಾನೂನು ತಿಳಿಯಿರಿ: ಮುರಳಿ ಮೋಹನ ರೆಡ್ಡಿ ಸಲಹೆ

Published 25 ನವೆಂಬರ್ 2023, 7:03 IST
Last Updated 25 ನವೆಂಬರ್ 2023, 7:03 IST
ಅಕ್ಷರ ಗಾತ್ರ

ಬೆಳಗಾವಿ: ‘ಜನನ ಮರಣ ನೋಂದಣಿ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಬಗ್ಗೆ ಸರಿಯಾದ ಅರಿವು ಮೂಡಿಸುವುದು ಅಗತ್ಯ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಮುರಳಿ ಮೋಹನ ರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇಂದಿರಾ ಗಾಂಧಿ ವಸತಿ ಶಾಲೆ–ತುಮ್ಮರಗುದ್ದಿ ಆಶ್ರಯದಲ್ಲಿ ಈಚೆಗೆ ನಡೆದ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾನೂನು ಎಂಬುದು ಹುಟ್ಟಿನಿಂದ ಸಾಯುವವರೆಗೆ ನಮ್ಮನ್ನು ನೆರಳಿನಂತೆ ಹಿಂಬಾಲಿಸಿ, ಸೂಕ್ತ ರಕ್ಷಣೆ ನೀಡುತ್ತದೆ. ಮಕ್ಕಳು ತಮ್ಮ ಹಕ್ಕುಗಳ ಕುರಿತು ಕಾಯ್ದೆ ಕಾನೂನುಗಳ ಕುರಿತು ಚೆನ್ನಾಗಿ ಅರಿತುಕೊಂಡು, ಮುಂದೆ ಈ ದೇಶದ ಪ್ರಜೆಗಳಾಗಬೇಕು’ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಮಾತನಾಡಿ, ‘ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾಯ್ದೆ, ದತ್ತು ಅಧಿನಿಯಮ ಕಾಯ್ದೆ, ಮತ್ತು ಬಾಲ ನ್ಯಾಯ ಕಾಯ್ದೆ (ಪೋಷಣೆ ಮತ್ತು ರಕ್ಷಣೆ) ಇತರೆ ಕಾಯ್ದೆ ಬಗ್ಗೆ ತಿಳಿಸಿದರು.

‘ಮಕ್ಕಳ ರಕ್ಷಣಾ ಘಟಕವು ಜಿಲ್ಲೆಯಲ್ಲಿರುವ ಏಕ ಪೋಷಕ, ಅನಾಥ, ಪರಿತ್ಯಕ್ತ, ಬಿಕ್ಷಾಟನೆ, ಬಾಲ ಕಾರ್ಮಿಕ, ಕಾಣೆಯಾದ ಮಕ್ಕಳು, ಮಾದಕ ವ್ಯಸನಿ ಮಕ್ಕಳು, ಲೈಂಗಿಕ ದೌರ್ಜನ್ಯ ಹಾಗೂ ಶಿಕ್ಷಣದಿಂದ ವಂಚಿತರಾದ ಮಕ್ಕಳು, ಬಾಲ್ಯ ವಿವಾಹಕ್ಕೊಳಗಾದ ಮಕ್ಕಳು ಹಾಗೂ ಇನ್ನಿತರ ಯಾವುದೇ ಸಮಸ್ಯೆ ಇರುವ ಮಕ್ಕಳ ಕುರಿತು ಈ ಕಚೇರಿಯು ಕಾರ್ಯ ನಿರ್ವಹಿಸುತ್ತದೆ’ ಎಂದು ತಿಳಿಸಿದರು.

ಆಪ್ತಸಮಾಲೋಚಕ ಮಹೇಶ ಸಂಗಾನಟ್ಟಿ, ಸಂಯೋಜಕ ಮಲ್ಲಪ್ಪ ಕೆ. ಕುಂದರಗಿ, ಪ್ರಾಂಶುಪಾಲರಾದ ಮಂಗಲಾ ಯು. ಗಡ್ಡಿ, ಶ್ರೀಮತಿ ಎನ್.ಜೆ. ಹುನ್ನೂರು, ಶ್ರೀಮತಿ ಎಸ್.ಬಿ. ಬಳೋಲ, ಶ್ರೀಮತಿ ಎಚ್.ಆರ್. ಸಿಮಾನಿ, ಶ್ರೀಮತಿ ಎಸ್.ಕೆ. ಲಂಕೆನ್ನವರ ಇನ್ನಿತರು ಇದ್ದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಕ್ಕಳ ರಕ್ಷಣೆಗಾಗಿಯೇ ಇದೆ. ಮಕ್ಕಳಿಗೆ ಸಮಸ್ಯೆ ಇದ್ದರೆ ತಕ್ಷಣವೇ ಸಹಾಯವಾಣಿ 1098 / 112ಗೆ ಕರೆ ಮಾಡಬೇಕು
ಮಹಾಂತೇಶ ಭಜಂತ್ರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT