ಶುಕ್ರವಾರ, ಮೇ 14, 2021
32 °C

ಬೆಳಗಾವಿ ಕ್ಷೇತ್ರ ಮರಳಿ ಕಾಂಗ್ರೆಸ್ ತೆಕ್ಕೆಗೆ: ಲಕ್ಷ್ಮಿ ಹೆಬ್ಬಾಳಕರ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಮರಳುವುದು ಖಚಿತ’ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರೊಂದಿಗೆ ಪ್ರಚಾರ ಸಭೆಗಳನ್ನು ನಡೆಸಿ ಅವರು ಮಾತನಾಡಿದರು.

ಓದಿ: 

‘ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ಕಟ್ಟಾ ಕಾಂಗ್ರೆಸ್ ಬೆಂಬಲಿಗರು. ಕಾರಣಾಂತರಗಳಿಂದ ಕೆಲವು ವರ್ಷ ಬಿಜೆಪಿ ಬೆಂಬಲಿಸಿರಬಹುದು. ಈಗ ಬಿಜೆಪಿಯ ಸುಳ್ಳು ಭರವಸೆಗಳು ಜನರಿಗೆ ಈಗ ಅರ್ಥವಾಗಿವೆ. ಮುಂದೆಯೂ ಅವರನ್ನು ಮೂರ್ಖರನ್ನಾಗಿಸಲು ಬಿಜೆಪಿಗೆ ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್‌ ಪುಟಿದೇಳಲಿದೆ’ ಎಂದರು.

ಬೀರದೇವರ ಮಂದಿರಕ್ಕೆ ತೆರಳಿ ಆಶೀರ್ವಾದ ಪಡೆದರು.

ಮಾರಿಹಾಳದಲ್ಲಿ ಸತೀಶ ಜಾಹರಕಿಹೊಳಿ ಹಾಗೂ ಶಾಸಕಿ ಬಸವೇಶ್ವರ ಮತ್ತು ವಾಲ್ಮೀಕಿ ಸಮಾಜದ ನಾಮಫಲಕಕ್ಕೆ ಗೌರವ ಸಲ್ಲಿಸಿದರು. ಮೋದಗಾ, ಪಂತ ಬಾಳೇಕುಂದ್ರಿ ಮತ್ತು ಕೆ.ಕೆ. ಕೊಪ್ಪ ಗ್ರಾಮದಲ್ಲಿ ಪ್ರಚಾರ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು