ರಾಜಕೀಯ ಪುನರ್ಜನ್ಮ ನೀಡಿದವರ ಸ್ಮರಣೆ‌: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಸೋಮವಾರ, ಮೇ 27, 2019
23 °C

ರಾಜಕೀಯ ಪುನರ್ಜನ್ಮ ನೀಡಿದವರ ಸ್ಮರಣೆ‌: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

Published:
Updated:
Prajavani

ಬೆಳಗಾವಿ: ‘ಕಳೆದ ವರ್ಷ ಮೇ 12ರಂದು ಗ್ರಾಮೀಣ ಮತ ಕ್ಷೇತ್ರದ ಮತದಾರರು ರಾಜಕೀಯ ಪುನರ್ಜನ್ಮ ನೀಡಿದರು. ಅವರ ಸ್ಮರಣೆಯಲ್ಲಿ ಆ ದಿನವನ್ನೇ ಹುಟ್ಟುಹಬ್ಬವಾಗಿ ಆಚರಿಸಿಕೊಳ್ಳುತ್ತಿದ್ದೇನೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇಲ್ಲಿನ ಲಕ್ಷ್ಮಿ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಶ್ರೀಗಳಿಂದ ಭಾನುವಾರ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಫೆ. 14 ನನ್ನ ಜನ್ಮ ದಿನ. ಆದರೆ, ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ತಾಯಂದಿರ ದಿನದಂದೇ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿದರು. ಅದು ನನ್ನ ಪುಣ್ಯ. ಅವರ ಮನೆ ಮಗಳಾಗಿ ಸೇವೆ ಸಲ್ಲಿಸುತ್ತೇನೆ’ ಎಂದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಶಾಸಕಿ ಕೇವಲ ಒಂದು ವರ್ಷದಲ್ಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಧಿಕಾರ ಬರುತ್ತದೆ; ಹೋಗುತ್ತದೆ. ಆದರೆ, ನಿರಂತರವಾಗಿ ಜನರ ಸಂಪರ್ಕದಲ್ಲಿದ್ದುಕೊಂಡು ಅವರ ಕಷ್ಟಗಳನ್ನು ಆಲಿಸಬೇಕು’ ಎಂದು ತಿಳಿಸಿದರು.

ಮುಖಂಡರಾದ ವಿರೂಪಾಕ್ಷಯ್ಯ ನೀರಲಿಗಿಠ, ಶರದ್ ಪಾಟೀಲ, ಅರವಿಂದ ಜೋಶಿ, ನಂದೀಶ, ಬಾಳಗೌಡ ಪಾಟೀಲ, ಉದಯ ಹುಲಿಕಾಂತಿಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !