ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಇ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ

Last Updated 12 ಫೆಬ್ರುವರಿ 2021, 7:39 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಕೆಎಲ್‌ಇ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ದಿ.ಪಂಡಿತ್ ಹಯವದನ ಜೋಶಿ ಅವರ 11ನೇ ಪುಣ್ಯಸ್ಮರಣೆ ಅಂಗವಾಗಿ ಸಮೂಹ ಭಜನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬೆಳಗಾವಿ, ಖಾನಾಪುರ, ಕಾಕತಿ, ನಂದಗಡ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ 22 ಭಜನಾ ಮಂಡಳಿಗಳು ಭಾಗವಹಿಸಿದ್ದವು. ಗದುಗಿನ ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸುಮಿತ್ರಾ ಕಾಡದೇವರಮಠ ಹಾಗೂ ಕೊಲ್ಹಾಪುರದ ಡಾ.ರಂಜನ ಕುಲಕರ್ಣಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮುಖ್ಯಅತಿಥಿಯಾಗಿ ಜೆಎನ್‌ಎಂಸಿ ಉಪ ಪ್ರಾಂಶುಪಾಲ ಡಾ.ರಾಜೇಶ ಪವಾರ ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಖಾಸಬಾಗದ ಕ್ರಾಂತಿ ಮಹಿಳಾ ಮಂಡಳಿಪ್ರಥಮ ಬಹುಮಾನವಾಗಿ ₹ 5ಸಾವಿರ ಪಡೆಯಿತು. ಸಾಧನಾ ಭಜನಾ ಮಂಡಳಿ ದ್ವಿತೀಯ (₹ 3ಸಾವಿರ) ಮತ್ತು ರವಳನಾಥ ಭಜನಾ ಮಂಡಳಿ ತೃತೀಯ (₹ 2ಸಾವಿರ) ಬಹುಮಾನ ಗಳಿಸಿತು.

ಸಂಗೀತ ವಿಭಾಗದ ಸಂಯೋಜಕ ಡಾ.ರಾಜೇಂದ್ರ ಭಾಂದನಕರ ಮಾತನಾಡಿ, ‘2008ರಲ್ಲಿ ಪಂಡಿತ್ ಹಯವದನ ಜೋಶಿ ಸಂಗೀತ ವಿಭಾಗ ಹುಟ್ಟುಹಾಕಿದರು. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

ವಿಭಾಗದ ಮುಖ್ಯಸ್ಥೆ ಡಾ.ಸ್ನೇಹಾ ರಾಜೂರಿಕರ್ ಸ್ವಾಗತಿಸಿದರು. ಡಾ.ಸುನೀತಾ ಪಾಟೀಲ ಹಾಗೂ ಡಾ.ದುರ್ಗಾ ನಾಡಕರ್ಣಿ ಪರಿಚಯಿಸಿದರು. ಜಿತೇಂದ್ರ ಸಾಬಣ್ಣವರ, ಯಾದವೇಂದ್ರ ಪೂಜಾರಿ, ರಾಜೇಂದ್ರ ಭಾಗವತ, ತಬಲಾ ಹಾಗೂ ಹಾರ್ಮೋನಿಯಂ ಸಾಥ್ ನೀಡಿದರು. ಸುಹಾಸಿನಿ, ವಿದ್ಯಾ ದೇಶಪಾಂಡೆ ಮತ್ತು ಶ್ರೇಯಾ ನಿರೂಪಿಸಿದರು. ಸೀಮಾ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT