ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸ್ತೂಲ್‌ ತೋರಿಸಿ ಬಂಗಾರ ಸುಲಿಗೆ: ಆರೋಪಿ ಬಂಧನ

Last Updated 29 ಜೂನ್ 2020, 12:12 IST
ಅಕ್ಷರ ಗಾತ್ರ

ಬೆಳಗಾವಿ: ಆಭರಣದ ಅಂಗಡಿ ಮಾಲೀಕಗೆ ಪಿಸ್ತೂಲ್ ತೋರಿಸಿ ಬಂಗಾರ ಸುಲಿಗೆ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಜಗಾವಿಯ ಸಂತ ಜ್ಞಾನೇಶ್ವರ ನಗರದ ವೈಭವ ರಾಜೇಂದ್ರ ಪಾಟೀಲ (29) ಬಂಧಿತ. ಅವರಿಂದ ₹ 3 ಲಕ್ಷ ಮೌಲ್ಯದ ಬಂಗಾರ, ಕಂಟ್ರಿ ಪಿಸ್ತೂಲ್, 3 ಸಜೀವ ಗುಂಡು ಹಾಗೂ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.

ಹಿಂದವಾಡಿ ಗುಮ್ಮಟಮಾಳದ ಸಚಿನ್‌ ನಾರಾಯಣ ಬಾಂಡಿವಾಡೇಕರ್ ಈ ಬಗ್ಗೆ ದೂರು ನೀಡಿದ್ದರು. ‘ಜೂನ್ 27ರಂದು ಸಂಜೆ 6.30ಕ್ಕೆ ಹಿಂಡಲಗಾ ರಸ್ತೆಯ ಚಿನ್ನಾಭರಣ ಅಂಗಡಿಗೆ ಬಂದ ಆರೋಪಿಯು ನಕ್ಲೆಸ್‌ಗಳನ್ನು ಖರೀದಿಸುವುದಾಗಿ ತಿಳಿಸಿ ವೀಕ್ಷಿಸಿದರು. ಒಂದಾದ ನಂತರ ಮತ್ತೊಂದು ಕೇಳಿದರು. ಒಟ್ಟು 4 ನಕ್ಲೆಸ್‌ಗಳನ್ನು ಜೇಬಿನಲ್ಲಿ ಹಾಕಿಕೊಂಡು, ಪಿಸ್ತೂಲ್‌ ತೋರಿಸಿ ಬೆದರಿಕೆ ಒಡ್ಡಿ ಓಡಿ ಹೋಗಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್‌ ಡಿ. ಸಂತೋಷ್‌ಕುಮಾರ್‌ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT