ಕಾಗವಾಡ: ಸಾವಿರಾರು ಶ್ರಾವಕ, ಶ್ರಾವಕಿಯರ ಸಮ್ಮುಖದಲ್ಲಿ ಅಷ್ಟ ದ್ರವ್ಯಗಳಿಂದ, 1 ಸಾವಿರ ಲಿಟರ್ ಹಾಲು, ಮೊಸರು, ತುಪ್ಪ, 2 ಸಾವಿರ ಶ್ರೀಫಳಗಳಿಂದ ಪದ್ಮಾವತಿ ದೇವಿಯ ಮೂರ್ತಿಗೆ ಕೃಷ್ಣಾ ನದಿಯಲ್ಲಿ ಅಭಿಷೇಕ ಮಾಡಿ ನದಿಗೆ ಅರ್ಪಣೆ ಮಾಡಿದರು.

ವಿಜಯದಶಮಿಯ ಹಬ್ಬದ ನಿಮಿತ್ತ ಬೆಳಿಗ್ಗೆ ಮಂದಿರದ ಅರ್ಚಕ ಅಶೋಕ ಉಪಾಧ್ಯೆ, ಮಂದಿರದ ಧರ್ಮಾಧಿಕಾರಿ ಶೀತಲಗೌಡ ಪಾಟೀಲ ದಂಪತಿಯಿಂದ ಪೂಜೆ ಸಲ್ಲಿಸಿ ಸಾವಿರಾರು ಶ್ರಾವಕರ ಸಮ್ಮುಖದಲ್ಲಿ ವಾದ್ಯ-ವೃಂದದೊಂದಿಗೆ ಕೃಷ್ಣಾ ನದಿಗೆ ತೆರಳಿ ಮಧ್ಯಾಹ್ನ ನದಿಗೆ ಪೂಜೆ ಸಲ್ಲಿಸಿದರು. ಅರ್ಚಕರು ಮತ್ತು ದೇವಿಯ ಸಾವಿರಾರು ಭಕ್ತರು ನದಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನವರಾತ್ರಿಯ 9 ದಿನಗಳ ಕಾಲ ಪದ್ಮಾವತಿ ದೇವಿಯ ಮಂದಿರಕ್ಕೆ ವಿದ್ಯುತ್ ದೀಪದ ಅಲಂಕಾರ ಮಾಡಿ 40 ಅಖಂಡ ತುಪ್ಪದ ಜ್ಯೋತಿಗಳನ್ನು ಹಚ್ಚಿ, ಬೆಳಿಗ್ಗೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ದೇವಿಯ ಅಲಂಕಾರ, ಅಷ್ಟಕ ಸ್ತೋತ್ರ, ಕುಂಕುಮಾರ್ಚನೆ, ಸಾಯಂಕಾಲ ಅಭಿಷೇಕ ಹಾಗೂ ನಿತ್ಯ ರಾತ್ರಿ 7ಕ್ಕೆ ಆದರ್ಶ ಮಹಿಳಾ ಮಂಡಳದ ವತಿಯಿಂದ ದಾಂಡಿಯಾ ಹಾಗೂ ಗರ್ಬಾ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಉಗಾರ ಬುದ್ರಕ ಗ್ರಾಮ ದೇವತೆ ಪದ್ಮಾವತಿ ದೇವಿಯ ಭಕ್ತರು ಯಾವುದೇ ಜಾತಿ ಬೇಧ ಭಾವವಿಲ್ಲದೇ ಮೆರವಣಿಗೆಯಲ್ಲಿ ಭಾಗವಹಿಸಿ ಭಾವೈಕ್ಯ ಮೆರೆದರು. ಮೆರವಣಿಗೆಯಲ್ಲಿ ಸ್ಥಳಿಯ ಪದ್ಮಭೂಷಣ, ಪದ್ಮಾವತಿ, ಪಾರ್ಶ್ವ ಪದ್ಮಾವತಿ, ಜಾಂಝ್ ಪಥಕದಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಲೆಜಿಮ್ ಪ್ರದರ್ಶಿಸಿದರು.

ಮಂದಿರದ ಧರ್ಮಾಧಿಕಾರಿ ಶೀತಲಗೌಡ ಪಾಟೀಲ, ವೃಷಭಗೌಡ ಪಾಟೀಲ, ಅಣ್ಣಾಗೌಡ ಪಾಟೀಲ, ರಾಜವೀರ ಪಾಟೀಲ, ಮುಖಂಡರಾದ ಅಣ್ಣಾಸಾಬ ನಂದಗಾವೆ, ಪ್ರಮೋದ ಹೊಸುರೆ, ಪ್ರಶಾಂತ ವಸವಾಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.