ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ಬುಧವಾರ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಹೊರಟ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿ ಬಹುತೇಕ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಕಳೆದ ವರ್ಷ ಡಿಸೆಂಬರ್ 10ರಂದು ಸುವರ್ಣ ವಿಧಾನಸೌಧದ ಎದುರಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಅದರ ಖಂಡನಾರ್ಥವಾಗಿ ಬುಧವಾರ, ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಬಾರಿ ಮೌನ ಪ್ರತಿಭಟನೆ ನಡೆಸಲು ಮುಖಂಡರು ಕರೆ ನೀಡಿದ್ದರು. ಎಡಗೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಬಲಗೈಯಲ್ಲಿ ಸಮಾಜದ ಧ್ವಜ ಹಿಡಿದುಕೊಂಡು ಮೆರವಣಿಗೆ ಕೈಗೊಂಡರು. ನಗರದ ಗಾಂಧಿ ಭವನದಿಂದ ಆರಂಭಿಸಿ ರಾಣಿ ಚನ್ನಮ್ಮ ವೃತ್ತದಲ್ಲಿ ಅರ್ಧ ತಾಸು ಬಂದ್ ಮಾಡಿದರು. ಅಲ್ಲಿಂದ ಮುಂದೆ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಧರಣಿ ಕುಳಿತರು. ಇದರಿಂದ ಎರಡೂ ವೃತ್ತಗಳಲ್ಲಿ ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತು.

‘ಸುವರ್ಣ ಸೌಧದ ಕಡೆಗೆ ಹೋಗುತ್ತೇವೆ’ ಎಂದು ಪ್ರತಿಭಟನಕಾರರು ಪಟ್ಟುಹಿಡಿದರು. ಪೊಲೀಸರು ಮನವರಿಕೆ ಮಾಡಿದರೂ ಧರಣಿ ಕೈ ಬಿಡಲಿಲ್ಲ. ಆಗ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸ್ ವಾಹನಗಳಲ್ಲಿ ಹತ್ತಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನೂ ಪೊಲಿಸ್ ವಾಹನದಲ್ಲಿ ಹತ್ತಿಸಿದ್ದರಿಂದ ಪ್ರತಿಭಟನಕಾರರು ಕಿಡಿ ಕಾರಿದರು. ಅಲ್ಲಿಯವರೆಗೆ ಮೌನವಾಗಿ ನಡೆಯುತ್ತಿದ್ದ ಪ್ರತಿಭಟನೆ ಆಕ್ರೋಶಕ್ಕೆ ತಿರುಗಿತು. ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ಸ್ವಾಮೀಜಿ ಅವರೊಂದಿಗೆ ಇದ್ದ ಶಾಸಕ ಅರವಿಂದ ಬೆಲ್ಲದ ಅವರನ್ನೂ ಹೊತ್ತುಕೊಂಡು ವಾಹನದೊಳಗೆ ಹಾಕಿದರು. ಆಗ ಪೊಲೀಸರು ಹಾಗೂ ಪ್ರತಿಭಟನಕಾರರ ಮಧ್ಯೆ ನೂಕಾಟ, ತಳ್ಳಾಟ ನಡೆಯಿತು.

ಮೆರವಣಿಗೆಯ ನೇತೃತ್ವ ವಹಿಸಿದ್ದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ ಹಾಗೂ ಸಿ.ಸಿ.ಪಾಟೀಲ ಅವರು ಒಂದು ತಂಡದ ಜತೆಗೆ ಮುಂದೆ ಸಾಗಿದ್ದರಿಂದ ಅವರನ್ನು ವಶಕ್ಕೆ ಪಡೆಯಲಿಲ್ಲ. ನಗರ ದಾಟಿದ ಮೇಲೆ ಮೂವರೂ ತಮ್ಮ ವಾಹನದಲ್ಲಿ ಸದನದತ್ತ ತೆರಳಿದರು.

‘ಸರ್ವಾಧಿಕಾರಿ ಸರ್ಕಾರಕ್ಕೆ ನೇಪಾಳದ್ದೇ ಗತಿ’

‘ಸದನದಲ್ಲಿ ಮಂಗಳವಾರ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು ‘ಅವನು’ ಟಿಪ್ಪು ಜಯಂತಿ ವಿಷಯ ತೆಗೆದ. ಅವನು ಪಂಚಮಸಾಲಿ ಸಮಾಜದ ಮತ ಪಡೆದು ಶಾಸಕನಾಗಿದ್ದಾನೋ ಟಿಪ್ಪು ಸಂಬಂಧಿಕರ ಮತ ಪಡೆದಿದ್ದಾನೋ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಾಸಕ ವಿಜಯಾನಂದ ಕಾಶಪ್ಪನವರ ಅವರ ಹೆಸರು ಹೇಳದೆಯೇ ಕಿಡಿ ಕಾರಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಟಿಪ್ಪು ಜಯಂತಿ ವಿಷಯ ತೆಗೆದ ‘ಕ್ಯಾಶಪ್ಪನವರ’ ಅವರನ್ನು ಸಿದ್ದರಾಮಯ್ಯ ಕರೆದು ಬೈಯ್ದಿದ್ದಾರೆ. ಇದೇ ವಿಚಾರವಾಗಿ ಕಳೆದ ಬಾರಿ ನನ್ನ ಕುರ್ಚಿ ಹೋಗುವ ಪರಿಸ್ಥಿತಿ ಬಂದಿತ್ತು. ಮತ್ಯಾಕೆ ಮಾತಾಡಿದೆಯೆಂದು ಕೇಳಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಬೈದಿದ್ದು ಸದನದೊಳಗೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಇವನು ನಮಾಜ್ ಮಾಡಲು ಮಸೀದಿಗೆ ಹೋದಾಗ ಬೈದಿರಬೇಕು’ ಎಂದರು.

‘2ಎ ಮೀಸಲಾತಿ ಬೇಡಿಕೆ ಅಸಾಂವಿಧಾನಿಕ ಎಂದು ಹೇಳುವ ಇದೇ ಸಿದ್ದರಾಮಯ್ಯ ಮುಸ್ಲಿಮರಿಗೆ ಅಸಾಂವಿಧಾನಿಕವಾಗಿ ಏಕೆ ಮೀಸಲಾತಿ ಕೊಟ್ಟಿದ್ದಾರೆ’ ಎಂದೂ ಆರೋಪಿಸಿದರು.

‘ರಾಜ್ಯದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಇವರೇಗೇನು ಬ್ಯಾನಿ?ವಿದ್ಯಾರ್ಥಿಗಳು ಹೋರಾಟ ನಡೆಸಿದರೆ; ಸರ್ಕಾರ ದೌರ್ಜನ್ಯ ಮಾಡುತ್ತಿದೆ. ನೇಪಾಳ ಪ್ರಧಾನಿಗೆ ಆದ ಗತಿಯೇ ಸಿದ್ದರಾಮಯ್ಯಗೂ ಆಗಲಿದೆ. ಸರ್ವಾಧಿಕಾರಿ ಸರ್ಕಾರಕ್ಕೆ ನೇಪಾಳದಲ್ಲಿನ ಪರಿಸ್ಥಿತಿಯೇ ಬರಲಿದೆ’ ಎಂದು ಕಿಡಿ ಕಾರಿದರು.

ಸುವರ್ಣಸೌಧಕ್ಕೆ ನುಗ್ಗಲು ಯತ್ನ

ಭೂ ಸುಧಾರಣೆ ಕಾಯ್ದೆ ರದ್ದು ಮಾಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಬುಧವಾರ ಸುವರ್ಣ ಸೌಧಕ್ಕೆ ನುಗ್ಗಲು ಯತ್ನಿಸಿದರು. ಮುಖ್ಯ ಗೇಟಿನವರೆಗೂ ಓಡಿಹೋದ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಸುವರ್ಣ ಉದ್ಯಾನದಲ್ಲಿ ರೈತರು ಧರಣಿ ಕುಳಿತಿದ್ದರು. ಮಧ್ಯಾಹ್ನ 3ರವರೆಗೂ ಯಾವುದೇ ಸಚಿವ ಸ್ಥಳಕ್ಕೆ ಬರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡು ಸೌಧಕ್ಕೆ ಮುತ್ತಿಗೆ ಹಾಕಲು ಹೊರಟರು. ಪೊಲೀಸರು ಮಾರ್ಗಮಧ್ಯದಲ್ಲೇ ಅವರನ್ನು ತಡೆದರು. ಆದರೆ 30ಕ್ಕೂ ಹೆಚ್ಚು ಜನ ರಾಷ್ಟ್ರೀಯ ಹೆದ್ದಾರಿ ಮೇಲೆ ಹತ್ತಿ ಓಡುತ್ತ ಬಂದು ಸುವರ್ಣಸೌಧದ ಗೇಟಿನೊಳಗೆ ನುಗ್ಗಲು ಮುಂದಾರು. ಅಪಾರ ಸಂಖ್ಯೆಯಲ್ಲಿದ್ದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ವಾಹನಗಳಲ್ಲಿ ಹತ್ತಿಸಿದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಹೋರಾಟದಲ್ಲಿದ್ದ ರಾಯಬಾಗ ತಾಲ್ಲೂಕಿನ ಕುಡಚಿ ಗ್ರಾಮದ ಯಲ್ಲಪ್ಪ ಹಿರೇಕುರಬರ (35) ಎಂಬುವರು ಮೂರ್ಛೆ ತಪ್ಪಿ ಬಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.