ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲೂ ಶತಕ ಬಾರಿಸಿದ ಡೀಸೆಲ್ ದರ

Last Updated 17 ಅಕ್ಟೋಬರ್ 2021, 4:28 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ಏರಿಕೆ ಕಂಡಿದೆ.

ಲೀಟರ್ ಪೆಟ್ರೋಲ್ ₹ 109ರ ಗಡಿ ದಾಟಿದೆ. ಡೀಸೆಲ್‌ ಬರೋಬ್ಬರಿ ₹ 100ನ್ನು ಮೀರಿದೆ. ಕೆಲವೇ ದಿನಗಳಲ್ಲಿ ಸರಾಸರಿ ₹ 2 ಜಾಸ್ತಿಯಾಗಿದೆ. ಸತತವಾಗಿ ತೈಲ ದರ ಹೆಚ್ಚಾಗುತ್ತಿರುವುದರಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗುತ್ತಿದೆ. ಇದರಿಂದ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದವರಿಗೆ ತೈಲ ಬೆಲೆ ಏರಿಕೆಯು ಬರೆ ಎಳೆದಿದೆ. ಬಡ ಹಾಗೂ ಮಧ್ಯಮ ವರ್ಗದವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್

ಅ.10;ಅ.17;ಅ.10;ಅ.17

ಎಚ್‌ಪಿ;107.21;109.29;97.95;100.18

ಐಒಸಿ;107.20;109.28;97.94;100.17

ಬಿಪಿ;107.20;109.28;97.94;100.17

(ಲೀಟರ್‌ಗೆ₹ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT