ಪಿಒಪಿ ಮೂರ್ತಿಗಳ ಹಾವಳಿ ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಗಣೇಶೋತ್ಸವ ಮಂಡಳಗಳ ಜತೆ ಸಭೆ ನಡೆಸಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಕೋರುತ್ತೇವೆ
ಎಚ್.ಹನುಮಂತಪ್ಪ ಉಪ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ
ಕೆಲ ಗ್ರಾಹಕರು ಒಂದು ವರ್ಷ ಮೊದಲೇ ಮೂರ್ತಿಗೆ ಬೇಡಿಕೆ ಸಲ್ಲಿಸಿರುತ್ತಾರೆ. ಮೂರ್ತಿಕಾರರು ಆಗಿನಿಂದಲೇ ಸಿದ್ಧಪಡಿಸಲು ಆರಂಭಿಸಿರುತ್ತಾರೆ. ಹಾಗಾಗಿ ಪಿಒಪಿ ಮೂರ್ತಿಗೆ ಕಡಿವಾಣ ಹಾಕಲಾಗಿಲ್ಲ. ಮುಂದಿನ ವರ್ಷ ಕಟ್ಟುನಿಟ್ಟಾಗಿ ನಿಯಮ ಅನುಷ್ಠಾನಗೊಳಿಸಲಾಗುವುದು
ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ
ಗ್ರಾಹಕರು ಬೇಡಿಕೆ ಸಲ್ಲಿಸಿದ ಮೂರ್ತಿ ಸಿದ್ಧಪಡಿಸಿಕೊಡುತ್ತೇವೆ. ಆದರೆ ಗ್ರಾಹಕರು ಪಿಒಪಿ ಮೂರ್ತಿಗಳನ್ನೇ ಕೇಳುತ್ತಿದ್ದಾರೆ. ಅವುಗಳಲ್ಲೂ ತುಸು ಮಣ್ಣು ಬಳಸುತ್ತಿದ್ದೇವೆ