ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮನ ಸಾವಿಗೆ ಸಚಿವ ಈಶ್ವರಪ್ಪ ನೇರ ಹೊಣೆ: ಪ್ರಶಾಂತ್ ಪಾಟೀಲ‌ ಆರೋಪ

Last Updated 12 ಏಪ್ರಿಲ್ 2022, 8:33 IST
ಅಕ್ಷರ ಗಾತ್ರ

ಬೆಳಗಾವಿ: ‘ಗುತ್ತಿಗೆದಾರನಾಗಿದ್ದ ನನ್ನ ತಮ್ಮ ಸಂತೋಷ್ ಪಾಟೀಲ‌ ಸಾವಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪಅವರೇ ನೇರ ಕಾರಣ’ಎಂದು ಪ್ರಶಾಂತ್ ಪಾಟೀಲ‌ ಆರೋಪಿಸಿದರು.

ಇಲ್ಲಿನ ಕ್ಯಾಂಪ್ ಪೊಲೀಸ್ ಠಾಣೆಗೆ ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

'ತಮ್ಮ ಹಿಂದಿನಿಂದಲೂ ಗುತ್ತಿಗೆ ಮಾಡುತ್ತಿದ್ದ. ₹ 4 ಕೋಟಿ ಮೊತ್ತದ ಕೆಲಸ ಮಾಡಿದ್ದೇನೆ. ಹಣ ಬಂದಿಲ್ಲ, ಬಹಳ ಕಷ್ಟವಾಗಿದೆ ಎಂದು ಹೇಳಿದ್ದ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯೂ ದಾಖಲಾಗಿತ್ತು. ಜೀವ ಬೆದರಿಕೆಯೂ ಇದೆ ಎಂದಿದ್ದ. ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ನಮ್ಮ ಸಮುದಾಯದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ನಮಗೆ ನ್ಯಾಯ ದೊರಕಿಸಿಕೊಡಬೇಕು' ಎಂದು‌ ಒತ್ತಾಯಿಸಿದರು.

'ತಮ್ಮ ಈಶ್ವರಪ್ಪ ಜೊತೆ ಚೆನ್ನಾಗಿದ್ದರು.‌ ಸಂತೋಷ್ ಪರಿಚಯವೇ ಇಲ್ಲ ಎಂದು ಈಶ್ವರಪ್ಪ ಸುಳ್ಳು ಹೇಳುತ್ತಿದ್ದಾರೆ' ಎಂದು ಆರೋಪಿಸಿದರು.

'ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ' ಎಂದು ತಿಳಿಸಿದರು.

ಅವರಿಗೆ ಒಂದು ವರ್ಷದ ಮಗುವಿದೆ. ಅವರ ಪತ್ನಿ ಊರಲ್ಲಿಲ್ಲ ಎಂದು ಹೇಳಿ ಕಣ್ಣೀರಿಟ್ಟರು.

ವಿಷಯ ಗೊತ್ತಿಲ್ಲ: ಬಿಎಸ್‌ವೈ
ಬೆಳಗಾವಿ
: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಪ್ರತಿಕ್ರಿಯೆ‌ ಕೊಡುವುದಿಲ್ಲ ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT