ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸಿಎಂ ಭೇಟಿಯಾಗಿ ಆಶೀರ್ವಾದ ಪಡೆದ ಪ್ರಿಯಂಕಾ

Published 12 ಜೂನ್ 2024, 15:46 IST
Last Updated 12 ಜೂನ್ 2024, 15:46 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಂಕಾ ಜಾರಕಿಹೊಳಿ ಅವರು ಮಂಗಳವಾರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.

ಪ್ರಿಯಂಕಾ ಜಾರಕಿಹೊಳಿ ಅವರಿಗೆ ಆಶೀರ್ವಾದ ಮಾಡಿದ ಡಿ.ಕೆ.ಶಿವಕುಮಾರ್‌, ಅತಿ ಕಿರಿಯ ಸಂಸದರಾದ ಪ್ರಿಯಾಂಕಾ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಪ್ರಿಯಾಂಕಾ ಅವರಿಗೆ ಹಿತನುಡಿಗಳನ್ನು ಹೇಳಿದ ಶಿವಕುಮಾರ್‌, ‘ಸದನದಲ್ಲಿ ಸದಾ ಹಾಜರಿದ್ದು, ಎಲ್ಲ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶ್ರದ್ಧೆಯಿಂದ ಆಲಿಸಿ, ಸೂಕ್ತವಾಗಿ ಸ್ಪಂದಿಸುವವರು ಮಾತ್ರ ಉತ್ತಮ ಸಂಸದೀಯ ಪಟುವಾಗಿ ಬೆಳೆಯಲು ಸಾಧ್ಯ’ ಕಿವಿಮಾತು ಹೇಳಿದರು.

ಸದನದಲ್ಲಿ ಸಂಸದರಾಗಿ ಹೇಗೆ ರಾಜ್ಯದ ಹಿತ ಕಾಯಬೇಕು ಎಂಬ ಬಗ್ಗೆ ತಿಳಿಸಿದ ಅವರು, ‘ಗ್ರಂಥಾಲಯದ ಪ್ರಯೋಜನ ಪಡೆದು ಸದನದಲ್ಲಿ ಮುತ್ಸದ್ದಿ ರಾಜಕಾರಣಿಗಳು ಮಾಡಿರುವ ಭಾಷಣಗಳನ್ನು ಓದುವಂತೆಯೂ ಸಲಹೆ ಮಾಡಿದರು. ಅಲ್ಲದೇ ಜೊಲ್ಲೆ ಅವರ ವಿರುದ್ಧ ಪ್ರಚಂಡ ಬಹುಮತದಿಂದ ಜಯ ಸಾಧಿಸಿರುವುದಕ್ಕಾಗಿ ಅಭಿನಂದನೆ’ ಸಲ್ಲಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮಾಜಿ‌ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಶಾಸಕ ಶಾಮ ಘಾಟಗೆ, ಯುವ ನಾಯಕ ರಾಹುಲ್‌ ಜಾರಕಿಹೊಳಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT