ಮೋಳೆ (ಬೆಳಗಾವಿ ಜಿಲ್ಲೆ): ಕಾಗವಾಡ ತಾಲ್ಲೂಕು ಐನಾಪುರ ಏತ ನೀರಾವರಿ ಯೋಜನೆಯಿಂದ ಕವಲಗುಡ್ಡ ಹಾಗೂ ಸಿದ್ದೇವಾಡಿ ಗ್ರಾಮಗಳ ಉಪ ಕಾಲುವೆಗೆ ಮಂಗಳವಾರ ನೀರು ಹರಿಸಲಾಗಿದೆ.
ನೀರು ಬಾರದಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಮಂಗಳವಾರ ಪ್ರಕಟವಾಗಿದ್ದ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾಲುವೆ ಸ್ವಚ್ಛಗೊಳಿಸಲು ಕ್ರಮ ವಹಿಸಿ ನೀರು ಬಿಡಿಸಿದರು.
ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ಕ್ಷಮೆ ಯಾಚಿಸಿದ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು.
ಎಇಇ ಕೆ. ರವಿ ಮಾತನಾಡಿ, ‘ಕೆಲವು ತಾಂತ್ರಿಕ ತೊಂದರೆಯಿಂದ ಟೆಂಡರ್ ಆಗಿರಲಿಲ್ಲ ಹಾಗೂ ಕೋವಿಡ್‌ನಿಂದಾಗಿ ಸ್ವಲ್ಪ ತಡವಾಗಿಯಾದರೂ ಕಾಲುವೆ ಸ್ವಚ್ಛಗೊಳಿಸಿ ಮಂಗಳವಾರದಿಂದ ನೀರು ಹರಿಸಲಾಗುತ್ತಿದೆ. ಅಗತ್ಯ ಸಿಬ್ಬಂದಿ ನೀಯೋಜಿಸಿ, ನಾಲೆಯ ಕೊನೆಯವರೆಗೂ ನೀರು ತಲುಪುವಂತೆ ನೋಡಿಕೊಳ್ಳಲಾಗುವುದು. ಅಲ್ಲಲ್ಲಿ ಕೆಲವು ರೈತರು ನೀರು ಬಿಡಲು ತೊಂದರೆ ಕೊಡುತ್ತಿದ್ದು, ಅವರ ಮನವೊಲಿಸಲಾಗುವುದು’ ಎಂದು ತಿಳಿಸಿದರು.
‘ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದವು. ಈ ವೇಳೆ ನಮ್ಮ ನೆರವಿಗೆ ಬಂದ ‘ಪ್ರಜಾವಾಣಿ’ಗೆ ಎರಡೂ ಗ್ರಾಮಗಳ ರೈತರು ಧನ್ಯವಾದಗಳನ್ನು ಸಲ್ಲಿಸುತ್ತೇವೆ’ ಎಂದು ಮುಖಂಡ ರಮೇಶ ವಾಘಮೋಡೆ ಹೇಳಿದರು.
ರೈತರಾದ ಪರಶುರಾಮ ಅವಳೆ, ನಿಂಗಪ್ಪ ಕೂಳ್ಳೋಳ್ಳಿ, ದೇವಪ್ಪ ಮಾನಗಾಂವೆ, ಮಹಾದೇವ ಮಾಳಿ, ನೀರಾವರಿ ಅಧಿಕಾರಿಗಳಾದ ಸಾಗರ ಪವಾರ, ಪ್ರಶಾಂತ ಪೋತದಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.