ಶುಕ್ರವಾರ, ಆಗಸ್ಟ್ 12, 2022
22 °C

ಗ್ರಾಮೀಣ ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ‘ಕೋವಿಡ್ ಸಂದರ್ಭದಲ್ಲೂ ಜೀವದ ಹಂಗು ತೊರೆದು ಮುಂಜಾನೆಯೇ ಮನೆಮನೆಗೆ ಪತ್ರಿಕೆ ತಲಿಪಿಸುವ ವಿತರಕರು, ಸುದ್ದಿಗಳನ್ನು ಸಿದ್ಧಪಡಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು’ ಎಂದು ಬಿಜೆಪಿ ಮುಖಂಡ ಚಿದಾನಂದ ಸವದಿ ಹೇಳಿದರು.

ಸಮೀಪದ ಕನ್ನಾಳ ಗ್ರಾಮದಲ್ಲಿ ಗ್ರಾಮೀಣ ಪತ್ರಕರ್ತರಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು.

‘ಜನರಿಗೆ ಸ್ಫೂರ್ತಿ ನೀಡುವ ವರದಿಗಳನ್ನು ಪತ್ರಿಕೆಗಳು ಕೊಡುತ್ತುವೆ. ಯಾವುದೇ ತೊಂದರೆ ಹಾಗೂ ತಪ್ಪಾದಲ್ಲಿ ಬೆಳಕು ಚೆಲ್ಲುವ ಪತ್ರಿಕೆಗಳ ಕೆಲಸ ಮಹೋನ್ನತವಾದುದು’ ಎಂದರು.

‘ಪತ್ರಕರ್ತರು, ವಿತರಕರು, ಬಡವರು, ರೈತರು, ಕೂಲಿಕಾರ್ಮಿಕರು, ಶೋಷಿತರ ಸೇವೆಗೆ ಸಿದ್ಧರಿದ್ದು, ಕಷ್ಟ ಹೇಳಿಕೊಂಡು ಬಂದವರ ಸೇವೆಯಲ್ಲಿಯೇ ದೇವರನ್ನು ಕಾಣುತ್ತೇವೆ. ನಂಬಿದ ಜನ ಸಂದಿಗ್ದ ಸ್ಥಿತಿಯಲ್ಲಿ ಸಿಲುಕಿದಾಗ ಮೌನದಿಂದ ಕೆಲಸ ಮಾಡುವ ಸಂಸ್ಕಾರ ತಂದೆ ಲಕ್ಷ್ಮಣ ಸವದಿ ಅವರದು’ ಎಂದು ಹೇಳಿದರು.

‘ಸಂಕಷ್ಟದ ಸಂದರ್ಭವನ್ನು ಒಟ್ಟಾಗಿ ಎದುರಿಸಬೇಕಾದ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಾ ಕುಳಿತರೆ ದೇವರು ಮೆಚ್ಚಲಾರ’ ಎಂದರು.

ಮುಖಂಡರಾದ ಸುಶೀಲಕುಮಾರ ಪತ್ತಾರ, ಯಂಕಣ್ಣ ಅಸ್ಕಿ, ಅಮೋಘ ಖೊಬ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು