ಸಂಕೇಶ್ವರ: ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ನಡೆಯಲು ಆ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಕಾರ್ಖಾನೆಗೆ ಕಳುಹಿಸಬೇಕು ಹಾಗೂ ಕಾರ್ಮಿಕರು ಕಬ್ಬನ್ನು ಸರಿಯಾದ ಸಮಯದಲ್ಲಿ ತಂದು ನುರಿಸಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಪಟ್ಟಣದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯ 66ನೇ ಹಂಗಾಮಿನ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

66 ವರ್ಷಗಳ ಹಿಂದೆ ದಿವಂಗತ ಶಾಸಕ ಅಪ್ಪಣ್ಣಗೌಡ ಪಾಟೀಲ ಅವರು ಸ್ಥಾಪಿಸಿದ ಕಾರ್ಖಾನೆಯು 25 ವರ್ಷಗಳ ಯಶಸ್ವಿಯಾಗಿ ನಡೆಯುತ್ತಾ ಬಂದಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾರ್ಖಾನೆಯು ಭಾರಿ ಪ್ರಮಾಣದ ನಷ್ಟ ಹಾಗೂ ಅಪಾರ ಪ್ರಮಾಣದ ಸಾಲ ಅನುಭವಿಸುತ್ತಿದೆ. ರೈತರಿಗೆ ಕಬ್ಬಿನ ಹಣ ಹಾಗೂ ಕಾರ್ಮಿಕರಿಗೆ ನಿಗದಿತವಾಗಿ ವೇತನ ಕೊಡಲು ಆಗದ ಸಂದರ್ಭದಲ್ಲಿ ಕಾರ್ಖಾನೆಯ ಸಂಚಾಲಕರ ಮನವೀಯ ಮೇರೆಗೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಭೀರೇಶ್ವರ ಸಹಕಾರ ಸಂಘ ಮತ್ತು ಜಿಲ್ಲಾ ಕೇಂದ್ರ ಬ್ಯಾಂಕನಿಂದ ಹಣಕಾಸು ನೆರವು ನೀಡಿ ಕಾರ್ಕಾನೆ ಒಂದು ಹಂತಕ್ಕೆ ತಂದಿದ್ದಾರೆ. ಕಾರ್ಖಾನೆ ಸುಧಾರಣೆ ಆಗಬೇಕಾದರೆ ರೈತರು ಮತ್ತು ಕಾರ್ಮಿಕರು ಸಹಕಾರ ನೀಡಬೇಕು ಎಂದರು.

ರೈತರ ಅನುಕೂಲಕ್ಕಾಗಿ ₹10 ಲಕ್ಷ ಅಪಘಾತ ವಿಮೆ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ₹10 ಲಕ್ಷ ಅಪಘಾತ ವಿಮೆ ಹಾಗೂ ₹2 ಲಕ್ಷ ಆರೋಗ್ಯ ವಿಮೆ ಕಾರ್ಖಾನೆಯಲ್ಲಿ ಜಾರಿಗೆ ತರಲಾಗುವುದು ಎಂದು ಶಾಸಕಿ ಜೊಲ್ಲೆ ಪ್ರಕಟಿಸಿದರು.

ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮಾತನಾಡಿ, ಈ ವರ್ಷ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯು 12 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ. ಅದಕ್ಕೆ ರೈತರು ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಿ ಸಹಕರಿಸಬೇಕು. ಕಾರ್ಮಿಕರಿಗೆ ಶೇ 8.33 ಬೋನಸ್ ನೀಡಲಾಗುವುದು ಎಂದರು.

ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಶ್ರೀ ಹಾಗೂ ಘೋಡಗೇರಿಯ ಶಿವಾನಂದ ಸ್ವಾಮೀಜಿ, ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಾಟೀಲ, ಸಂಚಾಲಕ ಎಸ್.ಎಸ್. ಶಿರಕೋಳಿ, ಬಾಬಾಸಾಹೇಬ ಅರಬೋಳಿ, ಶಿವನಾಯಿಕ ನಾಯಿಕ, ಪ್ರಭುದೇವ ಪಾಟೀಲ, ಬಸ್ಸಪ್ಪಾ ಮರಡಿ, ಸುರೇಶ ದೊಡ್ಡಲಿಂಗನ್ನವರ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಭಾರತಿ ಹಂಜಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಮೋಹನ ಕೋಟಿವಾಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.