ಬೆಳಗಾವಿ: ಹಣೆಯ ತುಂಬಾ ಭಂಡಾರ. ಕೊರಳಲ್ಲಿ ರಾಯಣ್ಣನ ಚಿತ್ರವಿರುವ ಡಾಲರ್‌ಗಳು. ಕ್ರಾಂತಿ ವೀರನಂತೆಯೇ ಉದ್ದನೆಯ ಮೀಸೆ. ಮನೆ, ಮಗ ಹಾಗೂ ವಾಹನಗಳಿಗೂ ಸಂಗೊಳ್ಳಿ ರಾಯಣ್ಣನ ಹೆಸರು...

ಹೌದು, ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ಮತ್ತು ಸ್ವಾತಂತ್ರ್ಯ ಸಂಗ್ರಾಮದ ‘ಬೆಳ್ಳಿ ಚುಕ್ಕಿ’ ವೀರ ರಾಣಿ ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿದ್ದ ಸಂಗೊಳ್ಳಿರಾಯಣ್ಣನ ಅಪ್ಪಟ ಅಭಿಮಾನಿಯ ಕಥೆ ಇದು.

ಬೆಳಗಾವಿಯ ಪೀರನವಾಡಿ ಗ್ರಾಮದ ಯಲ್ಲಪ್ಪ ಗಡದಾರ ಆ ವಿಶೇಷ ಅಭಿಮಾನಿ.

ಶೌರ್ಯ ತಿಳಿಸುತ್ತಾ...:

ಗೂಡ್ಸ್ ವಾಹನ ಹೊಂದಿರುವ ಅವರು, ಹೂವಿನ ತೋಟಗಳಿಗೆ ಮಣ್ಣು ಹಾಗೂ ಸಗಣಿ ಗೊಬ್ಬರ ಸಾಗಣೆ ಕೆಲಸ ಮಾಡುತ್ತಾರೆ. ಆ ಕಾಯಕದ ಮೂಲಕ ಜೀವನ ನಿರ್ವಹಿಸುತ್ತಿದ್ದಾರೆ. ಇನ್ನೊಂದೆಡೆ ರಾಯಣ್ಣನ ಅಭಿಮಾನ ಹಾಗೂ ಪ್ರೇಮವನ್ನು ಎದೆಯಲ್ಲಿ ತುಂಬಿಕೊಂಡು, ಆ ಸೇನಾನಿಯ ಶೌರ್ಯವನ್ನು ಇತರರಿಗೆ ತಿಳಿಸುತ್ತಿದ್ದಾರೆ. ಕನ್ನಡ ಪರ ಹೋರಾಟಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ‘ನಾನು ಕನ್ನಡಿಗ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಮ್ಮ ಪುತ್ರನಿಗೆ ‘ಸಂಗೊಳ್ಳಿ ರಾಯಣ್ಣ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿರುವ ಯಲ್ಲಪ್ಪ, ಇನ್ನೊಬ್ಬ ಪುತ್ರನಿಗೆ ರಾಯಣ್ಣನ ಜೀವದ ಗೆಳೆಯ ‘ಗಜರಾಜ’ ಎಂದು ಹೆಸರಿಟ್ಟಿದ್ದಾರೆ. ತಮ್ಮ ಗೂಡ್ಸ್ ವಾಹನದ ಮೇಲೆ ‘ಸಂಗೊಳ್ಳಿ ರಾಯಣ್ಣನ ಆಶ್ರಯದಲ್ಲಿ ಭಂಡಾರದ ಒಡೆಯ’ ಎಂದು ಬರೆಸಿದ್ದಾರೆ. ವಾಹನದ ಅಲ್ಲಲ್ಲಿ ರಾಯಣ್ಣನ ಚಿತ್ರಗಳು ರಾರಾಜಿಸುತ್ತಿವೆ. ದ್ವಿಚಕ್ರವಾಹನದಲ್ಲೂ ಅದೇ ಚಿತ್ರಣ.

ಬೆಳಗಾವಿಯ ಪೀರನವಾಡಿಯ ಯಲ್ಲಪ್ಪ ಗಡಾದರ ಅವರು ತಮ್ಮ ಮನೆಯಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ

ರಾಯಣ್ಣನ ಕೋಟೆ:

ತಮ್ಮ ಮನೆಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕೋಟೆ’ ಎಂದು ಬರೆಸಿದ್ದಾರೆ. ತುದಿಯಲ್ಲಿ ಹಾಗೂ ಬಾಗಿಲಿನ ಮೇಲಿನ ಗೋಡೆಯಲ್ಲಿ ಟೈಲ್ಸ್‌ನಲ್ಲಿ ರಾಯಣ್ಣನ ಫೋಟೊ ‘ಅಚ್ಚು’ ಹಾಕಿಸಿದ್ದಾರೆ. ಮನೆಯ ಬಾಗಿಲಿನ ಮೇಲೆ ‘ಜೈ ಕ್ರಾಂತಿವೀರ ಸಂಗೊಳ್ಳಿರಾಯಣ್ಣ’ ಎಂದು ಬರೆಸಿದ್ದಾರೆ. ಆ ವೀರನ ಜನನ ಮತ್ತು ಮರಣದ ದಿನಾಂಕ ಬರೆಸಿದ್ದಾರೆ. ‘ನಾನು ಕನ್ನಡಿಗ’ ಎಂದೂ ಕೆತ್ತಿಸಿದ್ದಾರೆ. ಅವರ ಮನೆ ಮೇಲೆ ಕನ್ನಡ ಬಾವುಟ ಹಾರಾಡುತ್ತಿದೆ.

ಮನೆ ಒಳಗೆ ವಿವಿಧೆಡೆ ರಾಯಣ್ಣನ ಫೋಟೊಗಳನ್ನು ಹಾಕಿದ್ದಾರೆ. ಶೋಕೇಸ್‌ನಲ್ಲಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಪೂಜಿಸುತ್ತಾರೆ. ಅಲ್ಲೊಂದು ನಂದಾದೀಪ ಸದಾ ಬೆಳಗುತ್ತಿರುತ್ತದೆ. ಈ ವಿಶೇಷದಿಂದಾಗಿ ಅವರು ಗಡಿಯಲ್ಲಿನ ಕನ್ನಡಿಗರು ಹಾಗೂ ರಾಯಣ್ಣನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ‘ಸಂಗೊಳ್ಳಿ ರಾಯಣ್ಣನ ಕೋಟೆ’ ಗಮನಸೆಳೆಯುತ್ತಿದೆ.

ಕ್ರಾಂತಿವೀರನಿಂದಾಗಿ ಪವಾಡ:

‘ನಾನು ಚಿಕ್ಕವನಾಗಿದ್ದಾಗ ಅಜ್ಜ–ಅಜ್ಜಿ ರಾಯಣ್ಣನ ಶೌರ್ಯದ ಕಥೆಗಳನ್ನು ಹೇಳುತ್ತಿದ್ದರು. ಆಗಿನಿಂದಲೂ ಅಭಿಮಾನವಿದೆ. ಪತ್ನಿಗೆ ಮೊದಲು ಹೆಣ್ಣು ಮಗುವಾಯಿತು. ಇದಾಗಿ 5 ವರ್ಷಗಳಾದರೂ ಮಗು ಆಗಿರಲಿಲ್ಲ. ಹಲವೆಡೆ ಆಸ್ಪತ್ರೆಗಳಿಗೆ ಓಡಾಡಿದ್ದೆವು. ಮಗುವಾಗುವ ಸಾಧ್ಯತೆ ಕಡಿಮೆ ಎಂದೇ ವೈದ್ಯರು ಹೇಳಿದ್ದರು. ಕೊನೆಗೆ ನಾನು ಪತ್ನಿ ರೇಖಾ ನಂದಗಡದಲ್ಲಿ ರಾಯಣ್ಣ ಸಮಾಧಿ ಸ್ಥಳದಲ್ಲಿರುವ ಮರಕ್ಕೆ ತೆಂಗಿನ ಕಾಯಿ ಕಟ್ಟಿ ಹರಕೆ ಹೊತ್ತಿದ್ದೆವು’ ಎಂದು ಯಲ್ಲಪ್ಪ ನೆನೆದರು.

‘ಗಂಡಾಗಲಿ, ಹೆಣ್ಣಾಗಲಿ ಮಗು ಬೇಕೆಂದು ಪ್ರಾರ್ಥಿಸಿದ್ದೆವು. ವರ್ಷದ ನಂತರ ಹೆಣ್ಣು ಮಗುವಾಯಿತು. ಮತ್ತೆ ಕಾಯಿ ಕಟ್ಟಿದೆವು. ಗಂಡು ಮಗು ಜನಿಸಿದರೆ ಸಂಗೊಳ್ಳಿರಾಯಣ್ಣ ಎಂದೇ ಹೆಸರಿಡುತ್ತೇವೆ ಹಾಗೂ ಅಲ್ಲೇ ನಾಮಕರಣ ಮಾಡುತ್ತೇವೆ ಎಂದು ಹರಕೆ ಹೊತ್ತಿದ್ದೆವು. ಗಂಡು ಮಗುವಾಯಿತು. ಅಲ್ಲಿಗೇ ಹೋಗಿ ನಾಮಕರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದೆವು’.

ಯಲ್ಲಪ್ಪ ತಮ್ಮ ಇಬ್ಬರು ಮಕ್ಕಳಿಗೆ ಸಂಗೊಳ್ಳಿ ರಾಯಣ್ಣ ಹಾಗೂ ರಾಯಣ್ಣನ ಗೆಳೆಯ ಗಜವೀರ ಎಂದು ಹೆಸರಿಟ್ಟಿರುವುದು

‘ಮತ್ತೊಂದು ಗಂಡು ಮಗುವಾದರೆ ‘ಗಜವೀರ’ ಎಂದು ಹೆಸರಿಡುವುದಾಗಿ ಹರಕೆ ಹೊತ್ತಿದ್ದೆವು. ಆ ಮಗುವಿನ ನಾಮಕರಣವನ್ನೂ ನಂದಗಡದಲ್ಲೇ ಮಾಡಿದೆವು. ರಾಯಣ್ಣನ ಆಶೀರ್ವಾದದಿಂದಾಗಿ ಜೀವನದಲ್ಲಿ ಪವಾಡವೇ ನಡೆಯಿತು. ಆತನೇ ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡುತ್ತಿದ್ದಾನೆ’ ಎಂದು ಬಲವಾಗಿ ನಂಬಿದ್ದಾರೆ ಅವರು. ಅವರಿಗೆ ಸುನೀತಾ ಹಾಗೂ ಸವಿತಾ ಎಂಬ ಇಬ್ಬರು ಪುತ್ರಿಯರೂ ಇದ್ದಾರೆ.

ಜ್ಯೋತಿ ತರಲು ಹೋದಾಗ:

ಪ್ರತಿ ಅಮಾವಾಸ್ಯೆಯಂದು ಖಾನಾಪುರ ತಾಲ್ಲೂಕು ನಂದಗಡದಲ್ಲಿರುವ ರಾಯಣ್ಣನ ಸಮಾಧಿ ಸ್ಥಳಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುವುದನ್ನು ಪಾಲಿಸುತ್ತಿದ್ದಾರೆ.

‘ಇದೇ ವರ್ಷ ರಾಯಣ್ಣನ ಜಯಂತಿ ಹಿಂದಿನ ದಿನ (ಆ.14) ರಾಯಣ್ಣನ ಜ್ಯೋತಿ ತರಲು ನಂದಗಡಕ್ಕೆ ಹೋಗುವಾಗ ವಾಹನ ಪಲ್ಟಿಯಾದರೂ ಯಾರೊಬ್ಬರಿಗೂ ಗಾಯವೂ ಆಗಲಿಲ್ಲ! ಅದಕ್ಕೆ ರಾಯಣ್ಣನ ಕೃಪೆಯೇ ಕಾರಣ. ಸತತ 3 ವರ್ಷಗಳವರೆಗೆ ಜ್ಯೋತಿ ತರುತ್ತೇವೆ, ಮೂರನೇ ವರ್ಷಕ್ಕೆ ಪೀರನವಾಡಿಯಲ್ಲಿ ಪ್ರತಿಮೆ ಸ್ಥಾಪನೆ ಆಗುವಂತೆ ಮಾಡಬೇಕು ಎಂದು ಹರಕೆ ಮಾಡಿಕೊಂಡಿದ್ದೆ. ಅದರಂತೆಯೇ ಪೀರನವಾಡಿಯಲ್ಲಿ ನಡೆಯಿತು. ಕನ್ನಡ ಹೋರಾಟಗಾರರು ನಮ್ಮ ಆಶಯಕ್ಕೆ ಬೆಂಬಲವಾಗಿ ನಿಂತರು’ ಎಂದರು ಯಲ್ಲಪ್ಪ.

ಮನೆ ಮೇಲೆ ಪ್ರತಿಮೆ: ಕನಸು

‘ಹೋದ ವರ್ಷ ಕಟ್ಟಿದ ಮನೆ ಇದು. ಈಗ ಮನೆಯೊಳಗೆ ಪ್ರತಿಮೆ ಇಟ್ಟಿದ್ದೇನೆ. ಮುಂದೆ ಮನೆ ಮೇಲೆ 9 ಅಡಿ ಎತ್ತರದ ಸಂಗೊಳ್ಳಿರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಬೇಕು ಮತ್ತು ಅಲ್ಲಿಂದ 50 ಅಡಿ ಎತ್ತರದ ಧ್ವಜ ಕಂಬ ಹಾಕಿ ಅದರಲ್ಲಿ ಕನ್ನಡ ಬಾವುಟ ಹಾರಿಸಬೇಕು. ಇದು ಊರಿನ ತುಂಬೆಲ್ಲಾ ಕಾಣುವಂತೆ ಮಾಡುವ ಕನಸಿದೆ’ ಎಂದು ಹಂಚಿಕೊಂಡರು.

ಅವರ ಅಭಿಮಾನಕ್ಕೆ ಪತ್ನಿ ಬೆಂಬಲವಾಗಿದ್ದಾರೆ. ಅವರ ಹಣೆಯಲ್ಲ ಕುಂಕುಮದೊಂದಿಗೆ ಭಂಡಾರ ಮಿನುಗುತ್ತಿರುತ್ತದೆ!

ರಾಯಣ್ಣನ ಅಭಿಮಾನಿ ಯಲ್ಲಪ್ಪ ಗಡಾದರ

‘ಪತ್ನಿ ಬಹಳ ಬೆಂಬಲ ಕೊಡುತ್ತಾರೆ. ಇದರಿಂದ ಕನ್ನಡದ ಕೆಲಸಕ್ಕೆ ನನಗೆ ಪ್ರೇರಣೆ ಸಿಗುತ್ತದೆ. ಪೀರನವಾಡಿಯಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ನಡೆದ ಹೋರಾಟಗಳಲ್ಲಿ ಪತ್ನಿ ಹಾಗೂ ನನ್ನ ಮಕ್ಕಳೆಲ್ಲರೂ ಭಾಗವಹಿಸಿದ್ದರು’ ಎಂದು ತಿಳಿಸಿದರು.

ಜನರೇನಂತಾರೆ?:

‘ಯಲ್ಲಪ್ಪ ಅವರು ಕ್ರಾಂತಿವೀರನ ನಿಜವಾದ ಅಭಿಮಾನಿಯಾಗಿದ್ದಾರೆ. ಅವರೊಬ್ಬ ನಿಜವಾದ ದೇಶ ಭಕ್ತ ಎಂದೂ ಹೇಳಬಹುದು’ ಎನ್ನುತ್ತಾರೆ ಎಂಜಿನಿಯರ್ ಕಿರಣ ಮಾಳನ್ನವರ.

‘ಯಲ್ಲಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ವೀರ ಸಂಗೊಳ್ಳಿ ರಾಯಣ್ಣನ ಅಪ್ಪಟ ಅಭಿಮಾನಿ. ಮನೆಗೆ ರಾಯಣ್ಣನ ಕೋಟೆ ಎಂದೇ ಹೆಸರಿಟ್ಟದ್ದಾರೆ. ಮನೆಯೊಳಗೆ ಬಂದರೆ ಎಲ್ಲ ಕಡೆಯೂ ಕಾಣುವುದು ರಾಯಣ್ಣನೇ. ಈ ವಿಶೇಷಗಳಿಂದ ಅವರು ಗಮನಸೆಳೆಯುತ್ತಿದ್ದಾರೆ’ ಎಂದು ನಿವಾಸಿ ವಿನಯ್ ಬ್ಯಾಳೇರಿ ಅಭಿಮಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.