ಬೆಳಗಾವಿ: ಇನ್ನೇನು ಬೇಸಿಗೆ ರಜೆ ಮುಗಿಯಲಿದ್ದು, 2025–26ನೇ ಸಾಲಿನ ತರಗತಿ ಮೇ 29ರಿಂದ ಆರಂಭವಾಗಲಿವೆ. ಮೊದಲ ದಿನವೇ ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆಹಾಕುವ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಏಳು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಂಟು ಸೇರಿದಂತೆ ಇಡೀ ಜಿಲ್ಲೆಯಲ್ಲಿ 15 ವಲಯಗಳಿವೆ. ಶಾಲಾರಂಭ ದಿನವೇ ಪ್ರತಿ ವಿದ್ಯಾರ್ಥಿಗೆ ಎಲ್ಲ ವಿಷಯಗಳ ಪಠ್ಯಪುಸ್ತಕ ವಿತರಿಸಲು ಇಲಾಖೆ ಯೋಜಿಸಿತ್ತು. ಆದರೆ, ಸರ್ಕಾರಿ, ಅನುದಾನಿತ ಶಾಲೆಗಳಿಗೆ ಉಚಿತವಾಗಿ ವಿತರಿಸುವ ಪಠ್ಯಪುಸ್ತಕ ಇನ್ನೂ ಶೇ 70ರಷ್ಟು ಪೂರೈಕೆಯಾಗಿಲ್ಲ.

ಈಗ ಶಾಲೆಗಳ ಪುನರಾರಂಭಕ್ಕೆ ನಾಲ್ಕೇ ದಿನ ಬಾಕಿ ಉಳಿದಿವೆ. ಇನ್ಮುಂದೆ ಆಯಾ ಬಿಇಒ ಕಚೇರಿಗೆ ಪಠ್ಯಪುಸ್ತಕ ಬಂದು, ವಿವಿಧ ಶಾಲೆಗಳಿಗೆ ಪೂರೈಸಲು ಸಮಯ ಬೇಕಾಗಲಿದೆ. ಹಾಗಾಗಿ ಮೊದಲ ದಿನವೇ ಎಲ್ಲ ಶಾಲೆಗಳ ಮಕ್ಕಳಿಗೂ ಎಲ್ಲ ವಿಷಯಗಳ ಪಠ್ಯಪುಸ್ತಕ ಸಿಗುವುದು ಕಷ್ಟ.

‘ಮೇ 29ರೊಳಗೆ ಎಲ್ಲ ಶಾಲೆಗಳಿಗೆ ಶೇ 100ರಷ್ಟು ಪಠ್ಯಪುಸ್ತಕ ವಿತರಿಸಲು ಪ್ರಯತ್ನಿಸುತ್ತೇವೆ. ಒಂದುವೇಳೆ ಆಗದಿದ್ದರೆ, ಶೇ 90ಕ್ಕಿಂತ ಹೆಚ್ಚು ವಿತರಣೆ ಪ್ರಕ್ರಿಯೆಯಂತೂ ಮುಗಿದಿರುತ್ತದೆ. ಲಭ್ಯವಿರುವ ಪಠ್ಯಪುಸ್ತಕ ಮೊದಲ ದಿನವೇ ಎಲ್ಲ ಮಕ್ಕಳಿಗೆ ವಿತರಿಸುತ್ತೇವೆ. ಉಳಿದವನ್ನು ಬೇಗ ನೀಡುತ್ತೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರೈಕೆ ಶುರು: ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಮುದ್ರಣಗೊಂಡ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮಗಳ 1ರಿಂದ 10ನೇ ತರಗತಿಯ ಪಠ್ಯಪುಸ್ತಕ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪೂರೈಕೆಯಾಗುತ್ತಿವೆ. ಅಲ್ಲಿಂದ ಸರ್ಕಾರಿ, ಅನುದಾನಿತ ಶಾಲೆಯವರು ಉಚಿತವಾಗಿ, ಅನುದಾನರಹಿತ ಶಾಲೆಯವರು ಸರ್ಕಾರದ ನಿಯಮದಂತೆ ಹಣ ಭರಿಸಿ ಮಾರಾಟದ ರೂಪದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ.

ರಾಜ್ಯದಲ್ಲಿ ವಿವಿಧ ಮಾಧ್ಯಮಗಳ 845 ಶೀರ್ಷಿಕೆಗಳ ಪಠ್ಯಪುಸ್ತಕ ಇವೆ. ಈ ಪೈಕಿ ಬೇಡಿಕೆ ಅನುಸಾರ ಆಯಾ ತಾಲ್ಲೂಕಿಗೆ ಪಠ್ಯಪುಸ್ತಕ ಪೂರೈಕೆಯಾಗಿವೆ. ಉರ್ದು ಮಾಧ್ಯಮದ ಹೆಚ್ಚಿನ ಶೀರ್ಷಿಕೆ ಬರಬೇಕಿವೆ.

1.06 ಕೋಟಿ ಪಠ್ಯಪುಸ್ತಕಕ್ಕೆ ಬೇಡಿಕೆ

ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಬಾರಿ 10689972 ಪಠ್ಯಪುಸ್ತಕ ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 3589358 ಉಚಿತ 1050845 ಮಾರಾಟ ಸೇರಿದಂತೆ 4640203 ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ಪೈಕಿ ಮೇ 23ರವರೆಗೆ 2327636(ಶೇ 64.85) ಉಚಿತ 779347(ಶೇ 74.16) ಮಾರಾಟ ಪಠ್ಯಪುಸ್ತಕ ಪೂರೈಕೆಯಾಗಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4732120 ಉಚಿತ 1317649 ಮಾರಾಟ ಸೇರಿದಂತೆ 6049769 ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ. ಈ ಪೈಕಿ 3101511 (ಶೇ 65.54) ಉಚಿತ 897963(ಶೇ 68.15) ಮಾರಾಟ ಪಠ್ಯಪುಸ್ತಕ ಪೂರೈಕೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.