ಉಗರಗೋಳ: ಗ್ರಾಮದ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಕಾರ್ತೀಕ ಮಾಸದ ಸೋಮವಾರದ ಪ್ರಯುಕ್ತ, ವಾರ್ಷಿಕ ಜಾತ್ರೆ ಸಡಗರದಿಂದ ನಡೆಯಿತು. ಗದ್ದುಗೆಗೆ ಮಹಾ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ, ಪೂಜೆ, ಮಹಾಮಂಗಳಾರತಿ ನೆರವೇರಿತು.

ಮಠದ ಆವರಣದಿಂದ ಹೂರಟ ಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ, ಮತ್ತೆ ಮಠದ ಆವರಣ ತಲುಪಿತು. ಕರಡಿ ಮಜಲು, ವೀರಗಾಸೆ, ಡೊಳ್ಳುಕುಣಿತ, ಭಜನೆ, ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಗಮನ ಸೆಳೆದವು.

ಬೆಂಗಳೂರಿನ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಮಹೇಶ ಹಿರೇಮಠ ಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಬಸನಗೌಡ ಪಾಟೀಲ, ಸಿದ್ದನಗೌಡ ಗೂಡರಾಶಿ, ಗಿರೀಶ ಸತ್ತಿಗೇರಿ, ಸುನೀಲ ಬೆಳವಡಿ, ಜಗದನಗೌಡ ಗಂದಿಗವಾಡ, ವಿಜಯ ನರಗುಂದ, ಪರಪ್ಪ ಸರಾಫ್, ಗೌಡಪ್ಪ ಗುಡೆನ್ನವರ, ಮಹಾದೇವ ಹಿರೇಹೊಳಿ, ಬಸವರಾಜ ಸಕಪ್ಪನವರ, ಮಹಾದೇವಪ್ಪ ಸಿದ್ದಾಪುರ, ಸಿದ್ದಯ್ಯ ಶಿವಪ್ಪಯ್ಯನಮಠ ಇದ್ದರು. ಭಕ್ತರಿಗೆ ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.