ಖಾನಾಪುರ ತಾಲ್ಲೂೂಕು ಸಡಾ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯ ಅವಶೇಷ
ದಟ್ಟ ಹಸಿರುನ ಮಡಿಲು...
ಸಡಾ ಮಾನ ಚೋರ್ಲಾ ಹೊಳಂದ ಕಣಕುಂಬಿ ಪಾರವಾಡ ಚಿಗುಳೆ ಬೇಟಣೆ ಗೋವಾ ರಾಜ್ಯದ ಸೂರಲ್ ಮಹಾರಾಷ್ಟ್ರದ ಮಾಂಗೇಲಿ ಗ್ರಾಮಗಳ ನಾಗರಿಕರು ಈ ಕೋಟೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಶಿವಾಜಿ ಮಹಾರಾಜರ ಜಯಂತಿ ದೀಪಾವಳಿ ಯುಗಾದಿ ಸೇರಿದಂತೆ ವಿಶೇಷವಾದ ಹಬ್ಬಹರಿದಿನಗಳಂದು ಸಡಾ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಊರಿನವರು ಸೇರಿ ಈ ಕೋಟೆ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಕೋಟೆಯ ಸಂರಕ್ಷಣೆಗೆ ತಮ್ಮಿಂದಾಗುವ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಆದರೂ ಕೋಟೆಯ ಸಂರಕ್ಷಣೆಗೆ ಸರ್ಕಾರದಿಂದಲೂ ಪ್ರಯತ್ನಗಳು ನಡೆಯಬೇಕು ಎಂಬುದು ಈ ಭಾಗದ ನಾಗರಿಕರ ಆಗ್ರಹ.