ಹುಕ್ಕೇರಿ: ನೀರು, ಗಾಳಿ ಮನುಷ್ಯನಿಗೆ ಅವಶ್ಯ. ಜನರು ಪರಿಸರ ಹಾಳು ಮಾಡುವುದನ್ನು ತಪ್ಪಿಸಲು ಪರಿಸರ ಸಂರಕ್ಷಣೆಗೆ ಸರ್ಕಾರದ ಜತೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅಭಿಮತ ವ್ಯಕ್ತಪಡಿಸಿದರು.

ತಾಲ್ಲೂಕಿನ ನೇರ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಪರಿಸರ ಸಂರಕ್ಷಣೆ ಅಂಗವಾಗಿ ಏಕ್ ಪೇಡ್ ಮಾ ಕೆ ನಾಮ ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ನಶಿಸಲಾರದ ಪ್ಲಾಸ್ಟಿಕ್ ಬಳಕೆಯಿಂದ ನಿಸರ್ಗದ ಮೇಲೆ ವಿಪರೀತ ಪರಿಣಾಮ ಬೀರಿದ್ದು, ಅದನ್ನು ಸಂಪೂರ್ಣವಾಗಿ ಬಳಕೆಯಲ್ಲಿ ನಿಷೆಧಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ನಿಖಿಲ್ ಕತ್ತಿ ಮಾತನಾಡಿ, ಕೇವಲ ಗಿಡ ನೆಟ್ಟರೆ ಸಾಲದು. ಅದರ ಪಾಲನೆಯನ್ನು ಮಕ್ಕಳಂತೆ ಮಾಡಬೇಕು. ಹಂತ ಹಂತವಾಗಿ ಗಿಡಮರಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಬಸವಪ್ರಸಾದ್ ಸಂಕಪಾಳ, ಸಹಕಾರಿ ಅಭಿವೃದ್ಧಿ ಅಧಿಕಾರಿ ಶಶಿಕಲಾ ಪಾಟೀಲ್, ಬಿಡಿಸಿಸಿ ಬ್ಯಾಂಕ್ ತಾಲ್ಲೂಕು ನಿಯಂತ್ರಣಾಧಿಕಾರಿ ಸೈದಪ್ಪ ಗದಾಡಿ, ಸಂಘದ ನಿರ್ದೇಶಕರಾದ ಶಿವಲಿಂಗ ಹುಕ್ಕೇರಿ, ಮಧುಕರ ಖೋತ, ಈರಪ್ಪ ಲಬ್ಬಿ, ಆಕಾಶ ಗುರವ್, ಶೋಭಾ ಕಲ್ಲೋಳಿಮಠ, ಗಾಯತ್ರಿ ಹೊಸಗೌಡ, ಸುನೀಲ ಹೊಸಮನಿ, ಅಪ್ಪಾಸಾಹೇಬ ಪಾಟೀಲ್, ಬ್ಯಾಂಕ್ ನಿರೀಕ್ಷಕ ಕೆ.ಎಸ್.ಗವಿಮಠ, ಸಿಇಒ ರಾಮಪ್ಪ ಶಿಂಧೆ, ಪಿಕೆಪಿಎಸ್ ಸಂಘದ ಮಾಜಿ ಅಧ್ಯಕ್ಷ ಈಶ್ವರ ಖೋತ, ಮುಖಂಡರಾದ ಅಣ್ಣಾಗೌಡ ಹೊಸಗೌಡ, ಸುಚೀತ ಪಾಟೀಲ್, ತಮ್ಮನಗೌಡ ಪಾಟೀಲ್, ಮಲ್ಲಪ್ಪ ಹುಕ್ಕೇರಿ, ಶಂಕರ ಸಂಕಪಾಳ, ಬಾಬುಗೌಡ ಪಾಟೀಲ್, ರಾಜು ಹಂದಿಗೂಡಮಠ ಸೇರಿದಂತೆ ಸದಸ್ಯರು,ಗ್ರಾಮಸ್ಥರು ಇದ್ದರು. ವಕೀಲ ಬಸವಪ್ರಭು ಸಂಕಪಾಳ ಸ್ವಾಗತಿಸಿದರೆ, ಸಿಇಒ ರಾಮಪ್ಪ ಶಿಂಧೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.