ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮದ್ಯ ಅಕ್ರಮ ಸಾಗಣೆ, ಇಬ್ಬರ ಬಂಧನ

Last Updated 2 ಸೆಪ್ಟೆಂಬರ್ 2020, 13:42 IST
ಅಕ್ಷರ ಗಾತ್ರ

ಬೆಳಗಾವಿ: ಗೋವಾ ಮದ್ಯವನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಅಬಕಾರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅವರಿಂದ ಗೂಡ್ಸ್‌ ವಾಹನ ಹಾಗೂ ಮದ್ಯ ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ತೋರವಾಡಿಯ ರಾಮ ಕಚ್ರು ಕರಾಡೆ ಹಾಗೂ ಕಿರಣ ಕಚ್ರು ಕರಾಡೆ ಬಂಧಿತರು. ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ವಶಕ್ಕೆ ಪಡೆದಿರುವ ವಾಹನ ಹಾಗೂ ಮದ್ಯದ ಮೌಲ್ಯ ₹ 10.76 ಲಕ್ಷ ಆಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಖಾನಾಪುರ ತಾಲ್ಲೂಕಿನ ಕಣಕುಂಬಿ ತನಿಖಾ ಠಾಣೆ ಬಳಿ ವಾಹನ ತಪಾಸಣೆಗೆ ಒಳಪಡಿಸಿದಾಗ ಮದ್ಯದ ಬಾಟಲಿಗಳು ದೊರೆತಿವೆ. ‘ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಮಾತ್ರ’ ಎಂದು ನಮೂದಿಸಿರುವ 180 ಎಂ.ಎಲ್.ನ ವಿಸ್ಕಿ 48 ಪೆಟ್ಟಿಗೆಗಳಲ್ಲಿ 2,304 ಬಾಟಲಿಗಳು ಒಟ್ಟು 414.720 ಲೀಟರ್‌, 180 ಎಂ.ಎಲ್. ಇಂಪೀರಿಯಲ್ ಬ್ಲೂ ವಿಸ್ಕಿ 12 ಪೆಟ್ಟಿಗೆಗಳಲ್ಲಿ 576 ಬಾಟಲಿಗಳು ಒಟ್ಟು 103.680 ಲೀಟರ್‌ ಸೇರಿ 518.400 ಲೀಟರ್‌ ಪತ್ತೆಯಾಯಿತು’ ಎಂದು ತಿಳಿಸಿದ್ದಾರೆ.

ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ವೈ. ಮಂಜುನಾಥ ಹಾಗೂ ದಕ್ಷಿಣ ಅಬಕಾರಿ ಉಪ ಆಯುಕ್ತ ಜಯರಾಮೇಗೌಡ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಇನ್‌ಸ್ಪೆಕ್ಟರ್‌ ಆರ್.ಬಿ. ಹೊಸಳ್ಳಿ ಪ್ರಕರಣ ದಾಖಲಿಸಿದ್ದಾರೆ. ಸಬ್‌ ಇನ್‌ಸ್ಪೆಕ್ಟರ್‌ಗಳಾದ ಸಿ.ಎಸ್. ಪಾಟೀಲ, ಎಂ.ಸಿ. ಗಲಗಲಿ, ಶ್ರೀಕಾಂತ ಅಸೂದೆ, ರಾಜು ಹೊಸಮನಿ, ಸಿಬ್ಬಂದಿ ಸುನೀಲ ಪಾಟೀಲ, ಕೆ.ಬಿ. ಕುರಹಟ್ಟಿ, ಬಿ.ಎಸ್. ಅಟಿಗಲ್, ವಿಠ್ಠಲ ಕೌರಿ, ಮಂಜು ಮಾಸ್ತಮರಡಿ, ಗುಂಡು ಪೂಜಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT