ಮಂಗಳವಾರ, ಸೆಪ್ಟೆಂಬರ್ 29, 2020
22 °C

ಬೆಳಗಾವಿ: ಅಥಣಿಯಲ್ಲಿ ಗಾಂಜಾ ಮಾರಾಟ, ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಜಾ ಮಾರಾಟ ಮಾಡುವ ಆರೋಪದ ಮೇಲೆ ಇಬ್ಬರ ಬಂಧನ

ಬೆಳಗಾವಿ: ಅಥಣಿ ತಾಲ್ಲೂಕಿನ ಹಣಮಾಪುರ ಕ್ರಾಸ್ ಬಳಿ ಶುಕ್ರವಾರ ತಡ ರಾತ್ರಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿ, ಅವರಿಂದ ₹ 39,920 ಬೆಲೆ ಬಾಳುವ 1 ಕೆ.ಜಿ. 996 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. 


ಬಂಧಿತರು

ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲ್ಲೂಕಿನ ಜೀರಗ್ಯಾಳ ಗ್ರಾಮದ ಸಾಗರ ಭರಮಾ ಕಟ್ಟಿಕರ (27) ಮತ್ತು ಗುರುಲಿಂಗ ಹೊಳೆಪ್ಪ ಡೋಲೆ (42) ಬಂಧಿತರು. ಅವರನ್ನು ಮಾದಕ ವಸ್ತು ಅಧಿನಿಯಮ ಕಾಯ್ದೆಯಡಿ ಬಂಧಿಸಲಾಗಿದೆ. ದ್ವಿಚಕ್ರ ವಾಹನ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ವೀರೇಶ ದೊಡಮನಿ, ಎಎಸ್ಐಗಳಾದ ಪಿ.ಎಸ್. ಭಜಂತ್ರಿ ಮತ್ತು ಎ.ಎಚ್. ಭಜಂತ್ರಿ ಹಾಗೂ ಸಿಬ್ಬಂದಿ ಎಲ್.ಎನ್. ಕುಂಬಾರ, ಜಿ.ಎಸ್. ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು