ಶುಕ್ರವಾರ, ಫೆಬ್ರವರಿ 28, 2020
19 °C

ಸಂಗೀತ ಶಿಕ್ಷಕರ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಗಾನಯೋಗಿ ಸಂಗೀತ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿ ನವನಾಥ ನಿಕ್ಕಂ ನೇತೃತ್ವದಲ್ಲಿ ಸದಸ್ಯರು ಇಲ್ಲಿನ ತಹಶೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದರು.

‘ಶಿಕ್ಷಣದ ಎಲ್ಲಾ ಹಂತಗಳಲ್ಲೂ ಸಂಗೀತ ಶಿಕ್ಷಣವಿರಬೇಕು. ಸಂಸ್ಕೃತ ಮತ್ತು ಉರ್ದು ಪಾಠಶಾಲೆಗಳಂತೆ ಸಂಗೀತ ಮತ್ತು ನೃತ್ಯ ಕಲಾ ಪಾಠ ಶಾಲೆಗಗೂ ಸರ್ಕಾರ ಅನುದಾನ ನೀಡಬೇಕು. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಗೀತ ನೃತ್ಯ ಪಾಠ ಶಾಲೆಗಳಿಗೆ ಕಡಿವಾಣ ಹಾಕಬೇಕು. ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ತಾಳ ವಾದ್ಯ ಮತ್ತು ವಾದ್ಯ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ವಕೀಲ ಕೆ.ಎಲ್. ಕುಂದರಗಿ ಮಾತನಾಡಿ, ‘ಸರ್ಕಾರವೇ ಸಂಗೀತ ವಿಷಯದ ಪದವೀಧರರಿಗೆ ನ್ಯಾಯ ಒದಗಿಸಬೇಕು. ನೇಮಕಾತಿ ಮಾಡಿಕೊಳ್ಳುವ ಮೂಲಕ ಅವರ ಬದುಕಿಗೆ ಆಧಾರವಾಗಬೇಕು’ ಎಂದು ಕೋರಿದರು.

ಉಪ ತಹಶೀಲ್ದಾರ್‌ ಬಿರಾದಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಕೆ.ಎಲ್. ಕುಂದರಗಿ, ಜ್ಯೋತಿಬಾ ಭೋಸಲೆ, ಅಶೊಕ ಸೂರ್ಯವಂಶಿ, ಭಾರತ ಪಡತರೆ, ಬಾಬಾಸಾಹೇಬ ಕಾಂಬಳೆ, ಮಹೇಂದ್ರ ಕಾಂಬಳೆ, ಲಲಿತಾ ಮೆಕನಮರಡಿ, ಗಣೇಶ ಮಾನೆ, ಸವಿತಾ ಗುಡ್ಡದ, ವಿದ್ಯಾರ್ಥಿಗಳಾದ ಅರ್ಚನಾ ಪಾಟೀಲ, ಪ್ರೀಯಾಂಕಾ ಪಾಟೀಲ, ನಜಮಾ ಮುಲ್ಲಾ, ವಿದ್ಯಾ ಬುರ್ಲಿ, ಪ್ರಿಯಾ ಪಾಟೀಲ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು