ಅಥಣಿ: ಇಲ್ಲಿನ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಸಮಾಜದವರು ಪೂಜೆ ಸಲ್ಲಿಸಿದರು.
ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ಪ್ರಧಾನ ಕಾರ್ಯದರ್ಶಿ ರಮೇಶ ಸಿಂದಗಿ ಮಾತನಾಡಿ, ‘ಈ ವರ್ಷ ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯವರು ಜಯಂತಿ ಆಚರಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಸಹದೇವ ನಾಯಕ, ಅಶೋಕ ಯಲಹಡಗಿ, ಬಸವರಾಜ ಬುಟಾಳೆ, ಸುನೀಲ ಸುಟ್ರಾಯ್, ಸಂತೋಷ ಸಿಂದಗಿ, ಪಿ.ಎಲ್. ಪೂಜಾರಿ, ರಮೇಶ ಹುಲ್ಯಾಳ, ಬಸವರಾಜ ಪಾಟೀಲ, ಭೀಮು ಪೂಜಾರಿ, ಮಹೇಶ ತೆರದಾಳ, ಶ್ರೀಮಂತ ನಡುವಿನಮನಿ, ಶಂಕರ ನಾಯಕ, ಪರುಶುರಾಮ ನಾಯಿಕ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.