ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗವಾಡ | ಮಿನಿ ವಿಧಾನಸೌಧ ಕಟ್ಟಿಸುವರೇ ಶಾಸಕ

Published 1 ಜೂನ್ 2023, 22:30 IST
Last Updated 1 ಜೂನ್ 2023, 22:30 IST
ಅಕ್ಷರ ಗಾತ್ರ

ವಿಜಯಮಾಹಾಂತೇಶ ಅರಕೇರಿ

ಕಾಗವಾಡ: ಸತತ ಐದು ಬಾರಿ ಆಯ್ಕೆಯಾಗಿದ ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಅವರ ಮೇಲೆ ಜನರು ಬೆಟ್ಟ ದಷ್ಟು ನಿರೀಕ್ಷೆ ಇಟ್ಟಿದ್ದಾರೆ. ತಮ್ಮದೇ ಕ್ಷೇತ್ರವನ್ನು ಮರಳಿ ಪಡೆದ ಅವರು, ಹಿಂದೆ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ. ಹಾಗಾಗಬೇಕೆಂದರೆ ಜನರ ನಿರೀಕ್ಷೆಗಳು ಹುಸಿಯಾಗಬಾರದು.

ನೂತನ ತಾಲ್ಲೂಕು ರಚನೆಗೊಂಡು ಐದು ವರ್ಷ ಕಳೆದರೂ ಸಂಪೂರ್ಣ ಕಚೇರಿಗಳು ಇಲ್ಲದೆ ಜನ ಅಥಣಿ ಕಾಗವಾಡ ಎರಡು ಕಡೆ ಅಲೆಯುವ ಸ್ಥಿತಿ ಇದೆ.ತಹಶೀಲ್ದಾರ್‌, ಸಿಡಿಪಿಒ, ಬಿಇಒ, ತಾಲ್ಲೂಕು ಪಂಚಾಯಿತಿ, ಕೃಷಿ, ಕಚೇರಿಗಳ ಮಾತ್ರ ಕಾಗವಾಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಗ್ನಿಶಾಮಕ ಠಾಣೆ‌ ಮಂಜೂರು ಆಗಿ ವಾಹನವು ಕೆಲಸ ಪ್ರಾರಂಭಿಸಿದರೂ ಸ್ವಂತ ಜಾಗವಿಲ್ಲದೇ ‌ಶೇಡಬಾಳ ಪ್ರವಾಸಿ ಮಂದಿರದಲ್ಲೇ ಇದ್ದು ಅಲ್ಲಿಂದಲೇ ಕಾರ್ಯ ನಿರ್ವಹಿಸುತ್ತಿವೆ.

ಕಾಗವಾಡ ಮಿನಿ ವಿಧಾನ ಸಭಾ ಕಟ್ಟಡಕ್ಕೆ 2.33 ಗುಂಟೆ ಸ್ಥಳ ಮಂಜೂರು ಆಗಿದ್ದು, ಕಂದಾಯ ಇಲಾಖೆಯಿಂದ ಕಟ್ಟಡಕ್ಕೆ ₹10 ಕೋಟಿ ಪ್ರಸ್ತಾವ ಕಳುಹಿಸಲಾಗಿದೆ. ಹಣ ಇನ್ನೂ ಬಿಡುಗಡೆ ಆಗಿರುವುದಿಲ್ಲ.

ಹೆಚ್ಚು ಅನುದಾನ ತರುವೆ’ ಕಾಗವಾಡ ಜನರು ಬಹು ನಿರೀಕ್ಷೆ ಇಟ್ಟು ನನ್ನು ಆಯ್ಕೆ ಮಾಡಿದ್ದು ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿ ಇರುವುದರಿಂದ ಹೆಚ್ಚಿನ ಅನುದಾನ ತಂದು ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಶ್ರಮಿಸಲಾಗುವುದು.
ರಾಜು ಕಾಗೆ, ಶಾಸಕ ಕಾಗವಾಡ

ಈ ಭಾಗದ ಜನರ‌ ಬಹು ನಿರೀಕ್ಷಿತ ಕೃಷಿ ಭೂಮಿಗೆ ನೀರು ಒದಗಿಸುವ ₹1363.40 ಕೋಟಿ ವೆಚ್ಚದ ಖಿಳೇಗಾಂವ ‌ಬಸವೇಶ್ವರ ಯಾತ ನೀರಾವರಿ ಯೋಜನೆ ಕಾಮಗಾರಿಗೆ 2017ರಲ್ಲಿ‌ ಆಗಲೂ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈಗಲೂ ಕಾಮಗಾರಿ ಕೊನೆಯ ಹಂತ ತಲುಪಿದ್ದು ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುವುದು ಇಲ್ಲಿನ ಜನರ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಕಾದು ಕುಳಿತಿದ್ದಾರೆ.

ಶಾಸಕ ರಾಜು ಕಾಗೆ ಚುನಾವಣೆಯಲ್ಲಿ ನಾನೇ ಪ್ರಾರಂಭ ಮಾಡಿರುವ ಯೋಜನೆ ನನ್ನಿಂದಲೇ ರೈತರ ಜಮೀನಿಗಳಿಗೆ ಹರಿಸುವೆ ಎಂದು ಹೇಳುತ್ತ ಬಂದಿದ್ದಾರೆ. ಆ ಮಾತು ಉಳಿಸಿಕೊಳ್ಳುತ್ತಾರೆ ಎಂದು ಜನರ ಅಭಿಪ್ರಾಯವಾಗಿದೆ.

ಇನ್ನು ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲ ಜೀವನ ಮಿಷನ್‌  ಕಾಮಗಾರಿ ಬಹಳ ಗ್ರಾಮಗಳಲ್ಲಿ ನಿರುಪಯುಕ್ತ ಆಗಿದ್ದು, ಅವುಗಳ ದುರಸ್ತಿ ಆಗಬೇಕಾಗಿದೆ. ಒಟ್ಟಾರೆ ಬಹಳ ನಿರೀಕ್ಷೆ ಇಟ್ಟು ರಾಜು ಕಾಗೆ ಅವರನ್ನು ಜನ ಆಯ್ಕೆ ಮಾಡಿದ್ದು ಆ ನಿರೀಕ್ಷೆ ಉಳಿಸಿಕೊಳ್ಳಬೇಕು ಎಂಬುವುದು ಮತ ಕ್ಷೇತ್ರದ ಮತದಾರರ ಅಭಿಪ್ರಾಯವಾಗಿದೆ.

ರಾಜು ಕಾಗೆ
ರಾಜು ಕಾಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT