ಯರಗಟಿ: ಕಬ್ಬಿಗೆ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ
ಹಮ್ಮಿಕೊಂಡಿದ್ದ ಧರಣಿ ಬುಧವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾಗಲಕೋಟಿ-ಬೆಳಗಾವಿ, ಗೋಕಾಕ- ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ನಿರಂತರ ನಾಲ್ಕು ದಿನದಿಂದ ಸಾರಿಗೆ ಬಸ್, ಖಾಸಗಿ ವಾಹನಗಳು ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡುಂತಾಗಿದೆ.

ಸವದತ್ತಿ ರೈತ ಮುಖಂಡ ಮಡಿವಾಳಪ್ಪ ಬಿದರಿ, ಮಾತನಾಡಿ, ಕಬ್ಬಿನ ದರಕ್ಕೆ ಪ್ರತಿ ವರ್ಷ ಪ್ರತಿಭಟನೆಗಳು
ನಡೆದರೂ ಕಾರ್ಖಾನೆ ಮಾಲೀಕರಿಗೆ ಸರ್ಕಾರ ಕಿವಿ ಹಿಂಡುವ ಕೆಲಸ ಮಾಡಿತ್ತಿಲ್ಲ.ಇನ್ನು ನಿರ್ಲಕ್ಷಿಸಿದರೆ
ಬರುವ ದಿನಗಳಲ್ಲಿ ಹೋರಾಟ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.

ಗೋಕಾಕ ರೈತ ಮುಖಂಡ ಉದಯ ಕರ್ಜಗಿಮಠ ಮಾತನಾಡಿ, ‘ಸರ್ಕಾರ ಕಾರ್ಖಾನೆ ಮಾಲೀಕರಿಗೆ ಕಟ್ಟುನಿಟ್ಟನ ಆದೇಶ ನೀಡಿ ಟನ್ ಕಬ್ಬಿಗೆ ₹3500 ಪಾವತಿ ಮಾಡಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಪಂಚನಗೌಡ ದ್ಯಾಮಗೌಡ, ಉಮೇಶ ಬಾಳಿ, ಮಹಾಂತೇಶ ತೋಟಗಿ , ಸೋಮು ರೈನಾಪೂರ ಯಕ್ಕರಪ್ಪ ತಳವಾರ, ಗೌಡಪ್ಪ ಸವದತ್ತಿ, ಪಕೀರಪ್ಪಕೀಲಾರಿ, ನಾಗಪ್ಪ ಪುಂಜಿ, ರಂಗಪ್ಪ ಗಂಗರಡ್ಡಿ
ಲಕ್ಷಮನ ಬಜ್ಜನ್ನವರ, ಶಿವಾನಂದ ನಾಯ್ಕ, ಸುರೇಶ ಬಂಟನೂರ, ಶಿವಾನಂದ ಕರಿಗೋಣ್ಣವರ ಇದ್ದರು.

ಯರಗಟ್ಟಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಯುತ್ತಿರುವ ರೈತರ ಧರಣಿಯಲ್ಲಿ ರೈತ ಮುಖಂಡ ಮಡಿವಾಳಪ್ಪ ಬಿದರಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.