ಭಾನುವಾರ, ನವೆಂಬರ್ 28, 2021
20 °C

ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್‌ ದರ ಸತತವಾಗಿ ಏರುಗತ್ತಿಯಲ್ಲಿ ಹೆಚ್ಚಾಗುತ್ತಲೇ ಇದೆ. ಸದ್ಯ ಬೆಲೆ ಇಳಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಪ್ರತಿ ಲೀಟರ್‌ ಪೆಟ್ರೋಲ್‌ ದರ ₹110 ದಾಟಿ ಮುನ್ನಡೆದರೆ, ಡೀಸೆಲ್‌ ದರ ನೂರರ ಗಡಿ ದಾಟಿ ಮುಂದಡಿ ಇಡುತ್ತಿದೆ. ಅಂದಹಾಗೆ, ಜಿಲ್ಲೆಯಲ್ಲಿ ಹೋದ ವಾರ (ಅ.10) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹109.07 ಇತ್ತು. ಈ ವಾರ ₹110.83ಕ್ಕೆ ಏರಿಕೆಯಾಗಿದ್ದು, ₹1.76 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್‌ ದರ ₹99.74 ಇತ್ತು. ಈ ವಾರ ₹101.59 ಆಗಿದ್ದು, ₹1.85 ಪೈಸೆ ಏರಿಕೆ ಕಂಡಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ– ಪೆಟ್ರೋಲ್‌ ಪೆಟ್ರೋಲ್‌ ಡೀಸೆಲ್‌ ಡೀಸೆಲ್‌ (₹ ಪ್ರತಿ ಲೀಟರ್‌ಗೆ)
ಅ.10 ಅ.17 ಅ.10 ಅ. 17
ಎಚ್.ಪಿ. 108.98 110.74 99.65 101.50
ಐ.ಒ.ಸಿ. 109.06 110.82 99.72 101.58
ಬಿ.ಪಿ. 109.07 110.83 99.74 101.59

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು